Site icon PowerTV

ಅಧಿಕಾರಿಗಳ ‘ಕೈ’ ಬಿಸಿ ಮಾಡಿದ್ರೆ ಮಾತ್ರ ಪುರಸಭೆಯಲ್ಲಿ ಕೆಲಸ!

ಬೀದರ್ : ‌ಹುಮನಾಬಾದ್‌ ಪುರಸಭೆಯಲ್ಲಿ ಭ್ರಷ್ಟಾಚಾರ ತಡೆಗಟ್ಟುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಹುಮನಾಬಾದ್‌ ಪುರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪ್ರತಿಯೊಂದು ಕೆಲಸಕ್ಕೂ ದುಡ್ಡು ‌ನೀಡಿ ಕೆಲಸ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ, ಪುರಸಭೆ ಆಡಳಿತ ವ್ಯವಸ್ಥೆಯನ್ನ ಸರಿಪಡಿಸುವಂತೆ ಒತ್ತಾತಿಸಿದರು.

ಹುಮನಾಬಾದ್ ಪುರಸಭೆಯಲ್ಲಿ ಯಾವುದೇ ಕೆಲಸ‌‌ ಆಗಬೇಕಾದರೂ ಹಣ ನೀಡಿಯೇ ಮಾಡಿಕೊಳ್ಳಬೇಕಾಗಿದೆ. ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ತಮಗೆ ಬೇಕಾದವರ ಹಾಗೂ ಹಣ ನೀಡಿದವರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುತ್ತಾರೆ. ಹಣ ನೀಡದೇ ಇರುವ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ

ಅಷ್ಟೇ ಅಲ್ಲದೇ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನಿರಂತರ ಮಳೆ ಸುರಿಯುತ್ತಿರುವದರಿಂದ ಚರಂಡಿಗಳು ತುಂಬಿಕೊಂಡಿದೆ. ರಸ್ತೆಗಳು ಹದಗೆಟ್ಟಿವೆ. ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಸಿದ್ದಾರೆ.

ಪುರಸಭೆಯಲ್ಲಿರುವ ಪ್ರತಿಯೊಬ್ಬ ಸಿಬ್ನಂದಿಯೂ ತಮ್ಮ ಐಡಿ ಕಾರ್ಡ್ ಹಾಕಿಕೊಂಡು ಕೆಲಸ ನಿರ್ವಹಿಸುವಂತೆ ಸೂಚನೆ ನೀಡಬೇಕು ಎಂದು ಮುಖ್ಯಾಧಿಕಾರಿಗೆ ಮನವಿ‌ ಸಲ್ಲಿಸಿದ್ದಾರೆ.

Exit mobile version