Site icon PowerTV

ಅಪ್ರಾಪ್ತ ಬಾಲಕಿ ಮೇಲೆ ಐವರು ಯುವಕರಿಂದ ಅತ್ಯಾಚಾರ

ಮಂಗಳೂರು : ಅಪ್ರಾಪ್ತ ಬಾಲಕಿ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಕೇರಳ ಗಡಿಭಾಗದ ಬಾಯಾರು ನಿವಾಸಿಗಳಾದ ಅಕ್ಷಯ್ (24), ಕಮಲಾಕ್ಷ (30), ಸುಕುಮಾರ (28), ರಾಜ ಹಾಗೂ ಜಯಪ್ರಕಾಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಬಾಲಕಿ ಮೇಲೆ ಪ್ರತ್ಯೇಕವಾಗಿ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಜಯಪ್ರಕಾಶ್ 2019ರಲ್ಲಿ ಬಾಲಕಿಯನ್ನು ತನ್ನ ಮನೆಯಲ್ಲೇ ಕರೆದುಕೊಂಡು ಹೋಗಿ ಅತ್ಯಾಚಾರಗೈದಿದ್ದ. 2023ರಲ್ಲಿ ಜನವರಿಯಲ್ಲಿ ಆರೋಪಿ ಅಕ್ಷಯ್ ಇದೇ ಬಾಲಕಿಯನ್ನು ಶಾಲೆ ಬಳಿ ಬಲವಂತವಾಗಿ ಅತ್ಯಾಚಾರ ಎಸಗಿದ್ದ. 2023ರ ಮೇನಲ್ಲಿ ಮತ್ತೊಬ್ಬ ಆರೋಪಿ ರಾಜ ಬಾಲಕಿಯನ್ನು ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಸತತ 4 ವರ್ಷದಿಂದ ಮಗಳ ಮೇಲೆ ಪಾಪಿಗಳು ಅತ್ಯಾಚಾರ ಎಸಗುತ್ತಿದ್ದರೂ ಪೋಷಕರ ಗಮನಕ್ಕೆ ಬಂದಿರಲಿಲ್ಲ. ಇದೇ ಜುಲೈ 27ರಂದು ರಾತ್ರಿ ಬಾಲಕಿ ಕಾಣೆಯಾಗಿದ್ದಳು. ಮರುದಿನ ಪಾಳು ಮನೆಯಲ್ಲಿ ಪತ್ತೆಯಾಗಿದ್ದಳು. ಪೋಷಕರು ವಿಚಾರಿಸಿದಾಗ ಅತ್ಯಾಚಾರ ಎಸಗಿರುವ ಬಗ್ಗೆ ಹೇಳಿಕೊಂಡಿದ್ದಳು. 2019 ರಿಂದ ತನ್ನ ಮೇಲೆ ಈ ರೀತಿಯ ಕೃತ್ಯ ನಡೆದಿರುವ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.

Exit mobile version