Site icon PowerTV

ಕ್ಷುಲ್ಲಕ ಕಾರಣ : ಎಣ್ಣೆ ಏಟಲ್ಲಿ ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ

ಬೆಂಗಳೂರು : ಕ್ಷುಲಕ ಕಾರಣಕ್ಕೆ ಚಾಕುವಿನಿಮದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೇಪಾಳ ಮೂಲದ ತಿಲಕ್ ಚಂದ್ (30) ಕೊಲೆಯಾದ ವ್ಯಕ್ತಿ. ಸಿದ್ದರಾಜು ಕೊಲೆ ಮಾಡಿರುವ ಸ್ನೇಹಿತ. ಕೊಲೆ ಮಾಡಿದ ಬಳಿಕ ಸ್ವತಃ ಆರೋಪಿಯೇ ಠಾಣೆಗೆ ಹೋಗಿ ಪೊಲೀಸರಿಗೆ ಸರೆಂಡರ್ ಆಗಿದ್ದಾನೆ.

ನಿನ್ನೆ ಸಂಜೆ ಇಬ್ಬರೂ ಎಣ್ಣೆ ಹೊಡೆಯಲು ಹೊಸಕೆರೆ ಹಳ್ಳಿಯ ಬಾರ್​ಗೆ ಹೋಗಿದ್ದರು. ಕಂಠಪೂರ್ತಿ ಕುಡಿದ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಮನೆಗೆ ಹೋಗುವಾಗ ಗಾಡಿ ಕೀ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ಆರೋಪಿ ಸಿದ್ದರಾಜು ಚಾಕುವಿನಿಂದ ತಿಲಕ್ ಚಂದ್​ಗೆ ಇರಿದು ಕೊಲೆ ಮಾಡಿದ್ದಾನೆ.

ಇದನ್ನು ಓದಿ : ಬೆಂಗಳೂರಿನಲ್ಲಿ ನಿಲ್ಲದ ನಕಲಿ ನೋಟ್ ದಂಧೆ!ಆರೋಪಿಗಳ ಬಂಧನ

ಮೃತ ತಿಲಕ್ ಚಂದ್ ಹಾಗೂ ಆರೋಪಿ ಸಿದ್ದರಾಜು ಇಬ್ಬರೂ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಂಗಡಿ ಮಾಲೀಕ ಇಬ್ಬರಿಗೂ ಓಡಾಡೋಕೆ ಅಂತ ಗಾಡಿ ಕೊಟ್ಟಿದ್ದರು. ನಿನ್ನೆ ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡು ಈ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version