Site icon PowerTV

ಸಿನಿಮೀಯ ರೀತಿಯಲ್ಲಿ 2.7 ಕೆಜಿ ಚಿನ್ನ ಕಳ್ಳತನ, ಮಾಲೀಕನೇ ಅರೆಸ್ಟ್!

ಬೆಂಗಳೂರು : ಇನ್ಸ್ಯೂರೆನ್ಸ್ ಕ್ಲೈಂಗಾಗಿ ಮಾಲೀಕನೇ ಕಳ್ಳಾಟವಾಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರತ್ ಪೇಟೆಯ ಕೈಲಾಶ್ ಜ್ಯುವಲರಿ ಮಾಲೀಕ ರಾಜ್ ಜೈನ್ ನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 2.7 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಸಿನಿಮಾ ಸ್ಟೈಲ್ ನಲ್ಲಿ ಮಾರ್ಕೆಟ್ ಫ್ಲೇಓವರ್ ನಲ್ಲಿ ೨.೭ಕೆಜಿ ಚಿನ್ನ ಕಳುವಾಗಿತ್ತು. ಬೈಕ್ ನಲ್ಲಿ ತೆರಳುತಿದ್ದ ಹುಡುಗರ ಸುಲಿಗೆ ಮಾಡಿದ್ದಾರೆ ಎಂದು ಮಾಲೀಕ ರಾಜ್ ಜೈನ್ ದೂರು ನೀಡಿದ್ದರು. ಈ ಬಗ್ಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನುಓದಿ : ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು : ಬಡಗಲಪುರ ನಾಗೇಂದ್ರ

ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಕಾದಿತ್ತು. ತನಿಖೆ ವೇಳೆ ದೂರು ಕೊಟ್ಟ ಮಾಲೀಕನ ಕಳ್ಳಾಟ ಬಯಲಾಗಿದೆ. ವಿಚಾರಣೆ ವೇಳೆ ಅಸಲಿ ಸಂಗತಿ ಬಯಲಾಗಿದೆ. ಹೈದ್ರಾಬಾದ್ ಗೆ ತನ್ನ ಕೆಲಸಗಾರರ ಮೂಲಕ ಚಿನ್ನ ಸಾಗಿಸುತಿದ್ದನು. ಇಬ್ಬರು ಸಿಬ್ಬಂದಿಗಳನ್ನು ಬಳಸಿಕೊಂಡು ತಾನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಇನ್ಸ್ಯೂರೆನ್ಸ್ ಕ್ಲೈಂ ಗಾಗಿ ಮಾಲೀಕ ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದನು. ಸದ್ಯ, ಅಂಗಡಿ ಮಾಲೀಕ ಹಾಗೂ ಇಬ್ಬರು ಬಾಲಾಪರಾಧಿಗಳ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

Exit mobile version