Site icon PowerTV

ಪತ್ನಿ ಕುತ್ತಿಗೆ ಸೀಳಿ ಪರಾರಿಯಾದ ಪತಿ

ಮಂಡ್ಯ : ಪತಿಯೇ ತನ್ನ ಪತ್ನಿಯ ಕತ್ತು ಕುಯ್ದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹುಲ್ಕೆರೆ ಗ್ರಾಮದಲ್ಲಿ ಘಟನೆ ನೆಡೆದಿದೆ.

ನಂಜನಗೂಡು ತಾಲೂಕಿನ ಕೊಂಗಳ್ಳಿ ಗ್ರಾಮದ ಸೌಮ್ಯ (24) ಮೃತ ಮಹಿಳೆ. ಗಣೇಶ(33) ಪತ್ನಿಯನ್ನು ಹತ್ಯಗೈದ ಪಾಪಿ ಪತಿ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕಳೆದ ಎಂಟು ವರ್ಷಗಳ ಹಿಂದೆ ಮೃತ ಸೌಮ್ಯ ಹಾಗೂ ಆರೋಪಿ ಗಣೇಶ ವಿವಾಹವಾಗಿತ್ತು. ಇಬ್ಬರ ದಂಪತಿಯ ಸುಂದರ ಸಂಸಾರಕ್ಕೆ ಏಳು ವರ್ಷದ ಗಂಡು ಮಗು ಸಹ ಇತ್ತು. ಬಳಿಕ ಸಂಸಾರದಲ್ಲಿ ಏನು ಬಿರುಕು ಮೂಡಿತ್ತೋ ಗೊತ್ತಿಲ್ಲ. ತನ್ನ ಪತ್ನಿ ಸೌಮ್ಯಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಗಣೇಶ ಎಸ್ಕೇಪ್ ಆಗಿದ್ದಾನೆ.

ಇದನ್ನು ಓದಿ : ಉಡುಪಿ ಪ್ರಕರಣ : ಅಶ್ಲೀಲ ಸಂದೇಶ ಕಳಿಸಿದ್ದವರ ವಿರುದ್ಧ ಎಫ್ಐಆರ್

ಮೃತ ಸೌಮ್ಯ ಮನೆಯಲ್ಲಿ ಕಾಣದ ಹಿನ್ನೆಲೆ ಅಕ್ಕಪಕ್ಕದ ಜನರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಪಾಂಡವಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version