Site icon PowerTV

ಬೊಮ್ಮಾಯಿಗೆ ಆ ಜವಾಬ್ದಾರಿ ಕೊಟ್ರೆ ಬಿಜೆಪಿ ನೆಲಕಚ್ಚುತ್ತೆ : ಎಸ್.ಲಿಂಗಮೂರ್ತಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಹವರಿಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲಕಚ್ಚುವುದು ಖಚಿತ ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್. ಲಿಂಗಮೂರ್ತಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಸ್. ಲಿಂಗಮೂರ್ತಿ, ‘ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪಕ್ಷ. ಬಸವರಾಜ ಬೊಮ್ಮಾಯಿ ಅಂತಹ ವ್ಯಕ್ತಿಗಳಿಗೆ ಜವಾಬ್ದಾರಿ ಕೊಟ್ಟರೆ ಮತ್ತೆ ನೆಲ ಕಚ್ಚುವುದು ಖಚಿತ’ ಎಂದಿದ್ದಾರೆ.

ರಾಜ್ಯದಲ್ಲಿ ವಿಪಕ್ಷ ಸ್ಥಾನದ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಹಲವರ ಹೆಸರು ಮುನ್ನಲೆಯಲ್ಲಿ ಇದೆ. ಈ ಪೈಕಿ ಬೊಮ್ಮಾಯಿ ಹೆಸರು ಕೂಡ ಒಂದು. ವಿಪಕ್ಷ ಸ್ಥಾನದ ಪೈಪೋಟಿಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ಮುಂಚೂಣಿಯಲ್ಲಿವೆ.

ಪಕ್ಷದ ನಾಯಕರು ಬೊಮ್ಮಾಯಿ ಕಡೆ ಬೆರಳು ತೋರಿಸಿದರೆ, ಕಾರ್ಯಕರ್ತರು ಯತ್ನಾಳ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಅದೇ ರೀತಿ ರಾಜ್ಯಧ್ಯಕ್ಷ ಸ್ಥಾನಕ್ಕೂ ಸಮರ್ಥ ನಾಯಕನ ಹುಡುಕಾಟದಲ್ಲಿ ಹೈಕಮಾಂಡ್ ನಿರತವಾಗಿದೆ.

Exit mobile version