Site icon PowerTV

ಬಿಜೆಪಿಯವರು ತಲೆ ಕೆಟ್ಟು ಮಾತಾಡ್ತಿದ್ದಾರೆ : ಶರಣಬಸಪ್ಪ ದರ್ಶನಾಪೂರ

ಯಾದಗಿರಿ : ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಿಗಿದೆ. ಸಿಎಂ ಕುರ್ಚಿ ಉಳಿಸಲು ಪರದಾಡುತ್ತಿದ್ದಾರೆಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಸಚಿವ ಶರಣಬಸಪ್ಪ ದರ್ಶನಾಪೂರ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಲೆ ಕೆಟ್ಟು ಹೀಗೆಲ್ಲ ಮಾತಾಡ್ತಿದ್ದಾರೆ. ತಮ್ಮ ಸರ್ಕಾರ ಇದ್ದಾಗ ಅವರು ಯಾರಿಗೂ ಏನೂ ಮಾಡ್ಲಿಲ್ಲ ಎಂದು ಕಿಡಿಕಾರಿದ್ದಾರೆ.

ಐದು ಗ್ಯಾರಂಟಿ ಜಾರಿ ಆಗಲ್ಲ ಅಂತ ಅವರ ಕನಸಿತ್ತು. ಗ್ಯಾರಂಟಿ ಯೋಜನೆ ಜಾರಿಗಾಗಿ ಸಾಲ ಮಾಡ್ತಾರೆ ಅಂತಿದ್ರು. ಈಗಾಗಲೇ ನಾವು ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಅವರು ವರ್ಷಕ್ಕೆ ಒಂದು ಗ್ಯಾರಂಟಿ ಜಾರಿ ಮಾಡ್ತಾರೆ ಅಂತಾ ಅನ್ಕೊಂಡಿದ್ರು. ಈಗ ಅವರ ನಿರೀಕ್ಷೆ ಸುಳ್ಳಾಗಿದೆ. ಈ ರೀತಿ ಮಾತಾಡ್ತಿದ್ದಾರೆ ಎಂದು ಕುಟುಕಿದ್ದಾರೆ.

ಆಪರೇಷನ್ ದಂಧೆ ಮಾಡ್ತಿದ್ದಾರೆ

ಭಾರತದಲ್ಲಿ ಎಲ್ಲಿ ಅವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ಹೇಳಿ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಸಹ ಆಯ್ಕೆ ಆಗಿಲ್ಲ. ಹೀಗಾಗಿ, ಎಲ್ಲ ಕಡೆಗೂ ಆಪರೇಷನ್ ದಂಧೆ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version