Site icon PowerTV

ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು : ಬಡಗಲಪುರ ನಾಗೇಂದ್ರ

ಮಂಡ್ಯ : ಒಂದು ಟನ್ ಕಬ್ಬಿಗೆ 4,500 ರೂಪಾಯಿ ನಿಗದಿ ಮಾಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್​ಆರ್​ಪಿ(FRP) ದರ ಏರಿಕೆ ಮಾಡಬೇಕು. ಸರ್ಕಾರ ಯಾವ ಬಿಲ್ ಸಹ ಸರಿಯಾಗಿ ನೀಡುತ್ತಿಲ್ಲ ಎಂದು ಬೇಸರಿಸಿದ್ದಾರೆ.

ಕಬ್ಬಿನ ದರ ಏರಿಕೆಗೆ ಆಗ್ರಹಿಸಿ ರೈತರು 108 ದಿನ ಪ್ರತಿಭಟನೆ ಮಾಡಿದ್ದರು. ಎಸ್​ಎಪಿ (SAP) ಜಾರಿ ಮಾಡಿ ರೈತರ ನೆರವಿಗೆ ರಾಜ್ಯ ಸರ್ಕಾರ ಬರಬೇಕು. ಕಬ್ಬಿನ ಕಟಾವು, ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಬೇಕು. ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎಂದು ಅವಲೊತ್ತಿಕೊಂಡಿದ್ದಾರೆ.

ಇದನ್ನೂ ಓದಿ : ಗೃಹಜ್ಯೋತಿ: ಉಚಿತ ವಿದ್ಯುತ್​ ಆಗಸ್ಟ್​ 5 ಕ್ಕೆ ಉದ್ಘಾಟನೆ

ಡಿಸ್ನಿಲ್ಯಾಂಡ್ ಕೈಬಿಡಬೇಕು

ಕೆಆರ್​ಎಸ್​ ಡ್ಯಾಂಗೆ ನೀರು ಬಂದಿದೆ. ಕೂಡಲೇ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯಬೇಕು. ಭತ್ತಕ್ಕೆ ನೀರು ಕೊಡಬೇಕು. ಆಗಸ್ಟ್ ತಿಂಗಳಲ್ಲಿ ಭತ್ತದ ನಾಟಿಯಾಗಬೇಕು. ಕೆಆರ್​ಎಸ್ ಡ್ಯಾಂ ಪಕ್ಕ ಡಿಸ್ನಿಲ್ಯಾಂಡ್ ಮಾಡ್ತಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಈ ಕುರಿತು ಮೈಸೂರಿನಲ್ಲಿ ಹೋರಾಟ ಮಾಡ್ತೀವಿ. ಡಿಸ್ನಿಲ್ಯಾಂಡ್ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿಮೆ ಮಾಡಿದ್ದಾರೆ. ಕೂಡಲೇ ಹಾಲಿನ ದರ ಹೆಚ್ಚಳ ಮಾಡಬೇಕು. ರೇಷ್ಮೆ ಬೆಳೆಗಾರರ ರಕ್ಷಣೆ ಮಾಡಬೇಕು. ಕೊಬ್ಬರಿ ದರ ಏರಿಕೆ ಮಾಡಬೇಕು. ರೈತರ ಬದುಕು ಮುಖ್ಯ. ಗಣಿಗಾರಿಕೆಗಾಗಿ ಹೋರಾಟ ಮಾಡಿದ್ದೇವೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

Exit mobile version