Site icon PowerTV

2 ದಿನಗಳ ಕಾಲ ಅರಮನೆ ಪ್ರವೇಶ ನಿರ್ಬಂಧ

ಮೈಸೂರು : ಜಿ20 ಶೃಂಗಸಭೆಗೆ ಬಂದಿರುವ ಗಣ್ಯರು ಮೈಸೂರು ಅರಮನೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಎರಡು ದಿನಗಳ ಕಾಲ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜಿ20 ಗಣ್ಯರು ಮತ್ತು ಅಧಿಕಾರಿಗಳು ಅರಮನೆಗೆ ಭೇಟಿ ನೀಡಲಿದ್ದು, ಆಗಸ್ಟ್ 1 ಮತ್ತು 2ರಂದು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಆಗಸ್ಟ್ 1ರಂದು ಮಧ್ಯಾಹ್ನ 2.30ರಿಂದ ನಿರ್ಬಂಧ ಆದೇಶವನ್ನು ಹೊರಡಿಸಲಾಗಿದ್ದು, ಆಗಸ್ಟ್ 2ರಂದು ಮಧ್ಯಾಹ್ನ ಧ್ವನಿ ಬೆಳಕು ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ. ಅಲ್ಲದೇ ಭದ್ರತಾ ದೃಷ್ಟಿಯಿಂದ ಅರಮನೆಯ ಸುತ್ತಮುತ್ತ ಡ್ರೋನ್ ಹಾರಾಟವನ್ನು ಸಹ ಪೊಲೀಸರು ನಿಷೇಧಿಸಿದ್ದಾರೆ.

Exit mobile version