Site icon PowerTV

ಬ್ಲೂ ಫಿಲ್ಮಂ ನೋಡುವ ಚಟ ಇರಬೇಕು : ಮಲ್ಲಿಕಾರ್ಜುನ್

ದಾವಣಗೆರೆ : ಮೊನ್ನೆ ಬ್ಲೂ ಸಿನಿಮಾ ನೋಡಿ, ಸಿಕ್ಕಿಬಿದ್ದಿದ್ದಾರಲ್ವಾ? ಸಿನಿಮಾ ನೋಡುವ ಚಟ ಇರಬೇಕು. ಇದು ಇವರ ಸಂಸ್ಕಾರಾನಾ? ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸಚಿವ ಎಸ್​.ಎಸ್​. ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ರು ಗುಟ್ಕಾ, ಮೈನ್ಸ್​ನಲ್ಲಿ ದುಡ್ಡು ಮಾಡಿದ್ದಾರೆ. ಚರ್ಚೆಗೆ ಹೈಸ್ಕೂಲ್ ಮೈದಾನಕ್ಕೆ ಬರಲಿ, ದಾಖಲೆ ಸಮೇತ ಬರುತ್ತೇವೆ. ಬಂದು ಫೇಸ್ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.

ಬಡ್ಡಿ ಸಮೇತ ವಸೂಲಿ ಮಾಡಿದ್ದಾರೆ ಅಂತ ಮೊನ್ನೆ ಸಂಸದರು ಹೇಳಿಕೆ ಕೊಟ್ಟಿದ್ದಾರೆ. ಬಡ್ಡಿ ಸಮೇತ ವಸೂಲಿ ಮಾಡಿ ಸಂಸದರು ಊರು ಹಾಳುಮಾಡಿದ್ದಾರೆ. ಮೈನಿಂಗ್​ನಲ್ಲಿ 220 ಕೋಟಿ ಅಕ್ರಮವಾಗಿದೆ, ಈ ಬಗ್ಗೆ ಚರ್ಚೆಗೆ ಬರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನೇ ಸಂಸ್ಕಾರ ಹೇಳಿಕೊಡ್ತೀನಿ

ನಾನು, ನಮ್ಮಪ್ಪ ಇಲ್ಲಿಯವರೆಗೂ ಬಡ್ಡಿ ವ್ಯವಹಾರ ಮಾಡಿಲ್ಲ. ನಾನು ಬಿಜೆಪಿ ಸಂಸದ ಸಿದ್ದೇಶ್ವರ್ ಅವ​ರಿಂದ ಸಂಸ್ಕಾರ ಕಲಿಯಬೇಕಿಲ್ಲ. ನಾನೇ ಬೇಕಾದ್ರೆ ಸಂಸದ ಸಿದ್ದೇಶ್ವರ್ ಅವರಿ​ಗೆ ಸಂಸ್ಕಾರ ಹೇಳಿಕೊಡ್ತೀನಿ ಎಂದು ಎಸ್​.ಎಸ್​. ಮಲ್ಲಿಕಾರ್ಜುನ್ ಗುಡುಗಿದ್ದಾರೆ.

ದಾವಣಗೆರೆಯಲ್ಲಿ ಸರ್ಕಾರಿ ಪಾರ್ಕ್​ ಅನ್ನು ನೋಂದಣಿ ಮಾಡಿಕೊಟ್ಟಿದ್ದಾರೆ. ಖಾತೆ ಮಾಡಿಕೊಟ್ಟ ಅಧಿಕಾರಿಯನ್ನು ಕೂಡ ಸಸ್ಪೆಂಡ್ ಮಾಡಿದ್ದಾರೆ. ಇದಕ್ಕೆಲ್ಲ ಸಂಸದ ಸಿದ್ದೇಶ್ವರ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

Exit mobile version