Site icon PowerTV

ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಹೋಮ

ಉಡುಪಿ : ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತೆ ಉಡುಪಿ ಜಿಲ್ಲೆ ಕಾಪು ತಾಲೂಕಿ‌ನ ಪಾದೆಬೆಟ್ಟು ಗ್ರಾಮದಲ್ಲಿರುವ ಸುಬ್ರಮಣ್ಯ ಸನ್ನಿಧಿಯಲ್ಲಿ ಹೋಮ ಮಾಡಲಾಗಿದೆ.

ಮುಂದಿನ ಲೋಕಸಭಾ ಚುನಾವಣೆ ಉದ್ದೇಶವಾಗಿಟ್ಟುಕೊಂಡು ಹೋಮ ಮಾಡಿಸಲಾಗಿದೆ. ಬಹುಮತದೊಂದಿಗೆ ಜಯ ಗಳಿಸುವಂತೆ ಪ್ರಾರ್ಥಿಸಿ ಹೋಮ ಮಾಡಿಸಿದ್ದಾರೆ. ನರೇಂದ್ರ ಮೋದಿ ಮಗದೊಮ್ಮೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ ಹೋಮ ನಡೆಸಿದ್ದಾರೆ.

ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮ ತಾರಕ ಮಂತ್ರ ಹೋಮ, ಚಂಡಿಕಾ ಹೋಮ ಅಥರ್ವಶೀರ್ಷ ಮಹಾಗಣಪತಿ ಹೋಮ, ಋಷಭಸೂಕ್ತ ಹೋಮ, ಮನ್ಯುಸೂಕ್ತ ಹೋಮ ಹಾಗೂ ರುದ್ರ ಯಾಗ ಮಾಡಿದ್ದಾರೆ.

Exit mobile version