Site icon PowerTV

ಕೋಲಾರ: ಲಕ್ಷಾಂತರ ಮೌಲ್ಯ ಟೊಮೊಟೊ ತುಂಬಿದ್ದ ಲಾರಿ ನಾಪತ್ತೆ!

ಕೋಲಾರ: ಕೋಲಾರದ ಎಪಿಎಂಸಿಯಿಂದ  ರಾಜಸ್ಥಾನದ ಜೈಪುರಕ್ಕೆ ತೆರಳುತ್ತಿದ್ದ ಟೊಮೆಟೊ ತುಂಬಿದ ಲಾರಿಯೊಂದು ನಾಪತ್ತೆಯಾಗಿರುವ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ತಂದೆ ಅಂತ್ಯ ಸಂಸ್ಕಾರ: ಮಗನ ದಾರಿ ಕಾಯುತ್ತಿರೋ ಕುಟುಂಬಸ್ಥರು

ಕೋಲಾರದ ಮಹತ್‌ ಟ್ರಾನ್ಸ್‌ಫೋರ್ಟ್‌ಗೆ ಸೇರಿದ ಲಾರಿ ಇದಾಗಿದ್ದು, ಸುಮಾರು 21 ಲಕ್ಷ ಮೌಲ್ಯದ ಟೊಮೆಟೊವನ್ನು ಕೋಲಾರದ ಎಪಿಎಂಸಿಯಲ್ಲಿ ತುಂಬಿ ರವಾನಿಸಲಾಗಿತ್ತು. ಮುನಿರೆಡ್ಡಿ ಎಂಬುವರಿಗೆ ಸೇರಿದ ಟೊಮೆಟೊ ಇದಾಗಿದೆ.

ಜುಲೈ 27ರಂದು ಕೋಲಾರದಿಂದ ತೆರಳಿತ್ತು. ಜುಲೈ 29ರ ರಾತ್ರಿ 8.30ರವರೆಗೆ ಚಾಲಕ ಸಂಪರ್ಕದಲ್ಲಿದ್ದರು. ಆ ಸಂದರ್ಭದಲ್ಲಿ ಲಾರಿ ಭೋಪಾಲ್‌ ಟೋಲ್‌ ದಾಟಿತ್ತು ಎನ್ನಲಾಗಿದೆ. ಆ ಬಳಿಕ ಲಾರಿ ಚಾಲಕ ಮೊಬೈಲ್‌ ಸಂಪರ್ಕಕ್ಕೆ ಸಿಗದಿದ್ದರಿಂದ ಆತಂಕಕ್ಕೆ ಒಳಗಾದ ಮಂದಿ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Exit mobile version