Site icon PowerTV

ನಾನು ಯಾಕೆ ಸಿಟ್ಟಾದೆ ಅಂತ ಹೇಳಲ್ಲ : ಬಿ.ಆರ್. ಪಾಟೀಲ್

ಕಲಬುರಗಿ : ತನ್ನ ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುವುದಾಗಿ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಹೇಳಿರುವುದು ನಿಜ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿಯಲ್ಲಿ  ಮಾತನಾಡಿದ ಅವರು, ಸಭೆ ನಡೆಯುತ್ತಿರುವಾಗ ಸಿಟ್ಟಾಗಿ ಹೊರಬಂದಿದ್ದು ನಿಜ. ನಂತರ ಸಚಿವರು ನನ್ನನ್ನು ತಡೆ ಹಿಡಿದರು. ಯಾಕೆ ಸಿಟ್ಟಾದೆ ಎಂಬುದರ ಕುರಿತು ಮಾಧ್ಯಮದ ಮುಂದೆ ಹೇಳಲ್ಲ. ಇದು ಆಂತರಿಕ ಸಮಸ್ಯೆ ಎಂದು ಹೇಳಿದ್ದಾರೆ.

ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ತೆರಳುತ್ತಿದ್ದೇನೆ. ಆದರೆ, ಪಕ್ಷದ ಕಡೆಯಿಂದ ಯಾರೂ ಸಹ ನನ್ನನ್ನು ಬರಲು ಹೇಳಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣು ಪಾಟೀಲ್‌ ಇತರರು ಇದ್ದರು.

Exit mobile version