Site icon PowerTV

ಜಯನಗರ ಆಸ್ಪತ್ರೆಗೆ ದಿನೇಶ್ ಗುಂಡೂರಾವ್ ಭೇಟಿ

ಬೆಂಗಳೂರು : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಾರ್ವಜನಿಕರ ಸಾಲು ಸಾಲು ದೂರುಗಳ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಸರ್ಕಾರಿ ಆಸ್ಪತ್ರೆಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆ ದುರಸ್ತಿ, ಚಿಕಿತ್ಸೆ ಬಗ್ಗೆ ಇಂದು ಪರೀಶಿಲನೆ ನಡೆಸಿದರು.

ಸಮಸ್ಯೆಗಳು ಕಂಡು ಬಂದಲ್ಲಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆಗಳ ಬಗ್ಗೆ ಸಿಬ್ಬಂದಿ ದಿನೇಶ್ ಗುಂಡೂರಾವ್ ಬಳಿ ಅಳಲು ತೋಡಿಕೊಂಡರು. ಆಸ್ಪತ್ರೆಯ ಗೋಡೆಗಳು ಇಂದು-ನಾಳೆ ಬೀಳೋ ಸ್ಥಿತಿಯಲ್ಲಿವೆ. ಆಸ್ಪತ್ರೆಗೆ ಇಂಜಿನಿಯರ್​​ರನ್ನು ಕರೆಸುವಂತೆ ಸಚಿವರು ಸೂಚನೆ ನೀಡಿದರು.

ಸಿಬ್ಬಂದಿಗಳಿಂದ ಕೆಲಸ

ಜಯನಗರ ಸಾರ್ವಜನಿಕರ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕೊರತೆಯಿದೆ. ಎಕ್ಸ್​ರೇ 3 ಜನ ಡಿಪಾರ್ಟ್ ಮೆಂಟ್‌ನಲ್ಲಿ 3 ಸ್ಟಾಪ್ಸ್‌ಗಳಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಕಳೆದ 2 ವರ್ಷದಿಂದ ಸೀನಿಯರ್ ಎಕ್ಸ್ ರೇ ಟೆಕ್ನಿಷಿಯನ್ ಪೋಸ್ಟ್ ಖಾಲಿಯಿದೆ. ಕೇವಲ 3 ಜನ ಸಿಬ್ಬಂದಿಗಳಿಂದ ಕೆಲಸ ನಿರ್ವಹಿಸಲು ಕಷ್ಟ ಎಂದು ಹೇಳಿಕೊಂಡಿದ್ದಾರೆ.

ಆದಷ್ಟು ಬೇಗ ಕಟ್ಟಡ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ದಿನೇಶ್ ಗುಂಡೂರಾವ್ ರಾವ್ ಜೊತೆ ಆಸ್ಪತ್ರೆ ಪರೀಶಿಲನೆಗೆ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಕೂಡ ಬಂದಿದ್ದರು.

Exit mobile version