Site icon PowerTV

ಹಳೇ ದ್ವೇಷ: 2 ಕುಟುಂಬಗಳ ನಡುವೆ ಸಿನಿಮೀಯ ಶೈಲಿಯಲ್ಲಿ ಫೈಟ್!

ಕಲಬುರಗಿ : ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಕಲ್ಲು ತೂರಾಟ ನಡೆಸಿ ಮಾರಾಮಾರಿ ಹೊಡೆದಾಡಿಕೊಂಡಿರುವ ಘಟನೆ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​ ಸೇರಲು ತೆರೆಮರೆಯ ಕಸರತ್ತು ನಡೆಸುತ್ತಿರುವ ಬಾಂಬೆ ಬಾಯ್ಸ್!

ಇಂಗಳಗಿ ಗ್ರಾಮದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದ ಆಚರಣೆ ವೇಳೆ ಹೊನಗುಂಟಾ, ಗೋಟಾಳ್‌ ಕುಟುಂಬದ ನಡುವಿನ ಹಳೆ ವೈಷಮ್ಯ ಮತ್ತೆ ಬುಗಿಲೆದಿದ್ದು ಪೊಲೀಸರ ಮುಂದೆಯೇ ಸಿನಿಮೀಯ ರೀತಿಯಲ್ಲಿ ಕಲುತೂರಾಟ ನಡೆಸಿ ಹೊಡೆದಾಡಿಕೊಂಡಿದ್ದಾರೆ.

ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳಿಂದ ಎರಡೂ ಕುಟುಂಬಗಳ ನಡುವೆ ಪದೇಪದೆ ಕಿತ್ತಾಟ ನಡೆಯುತ್ತಲೇ ಇತ್ತು, ಅದೇ ರೀತಿ ನಿನ್ನೆ ಸಂಜೆ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಸಿನಿಮೀಯ ಶೈಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ ಘಟನೆಯಲ್ಲಿ 8 ಜನರಿಗೆ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಈ ಹೊಡೆದಾಟ ಪ್ರಕರಣವು ವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Exit mobile version