Site icon PowerTV

ಮೈಸೂರು ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಕಳ್ಳರ ಕಾಟ

ಮೈಸೂರು : ಪ್ರಸುತ್ತ ಶುಂಠಿಗೆ ಉತ್ತಮ ಬೆಳೆ ಹಿನ್ನೆಲೆ ರಾತ್ರೋ ರಾತ್ರಿ ಶುಂಠಿ ಬೆಳೆಗೆ ಖನ್ನ ಹಾಕಿರುವ ಕದೀಮರು, ಪಿರಿಯಾಪಟ್ಟಣ ತಾಲೂಕಿನ ಬೈಲಕಪ್ಪೆಯ ಟಿಬೇಟಿಯನ್ ನಿರಾಶ್ರೀತರ ಜಮೀನಿನಲ್ಲಿ ಘಟನೆ ನೆಡೆದಿದೆ.

ಟಿಬೇಟಿಯನ್ ರೈತ ಲಾಕಪಾ ಸೇರಿಂಗ್ ಎಂಬ ವ್ಯಕ್ತಿ ಕಳೆದ ಹಲವು ದಿನಗಳಿಂದ ಸಾಲ ಮಾಡಿ ಉತ್ತಮವಾದ  ಶುಂಠಿ ಬೆಳೆದಿದ್ದ ರೈತನಿಗೆ ಸಾಕಷ್ಟು ನಷ್ಟವಾಗಿದೆ. ಪ್ರಸ್ತುತ ಶುಂಠಿಗೆ ಉತ್ತಮ ಬೆಲೆ ಹಿನ್ನಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ.

ಇದನ್ನು ಓದಿ : ತಂದೆ ಅಂತ್ಯ ಸಂಸ್ಕಾರ: ಮಗನ ದಾರಿ ಕಾಯುತ್ತಿರೋ ಕುಟುಂಬಸ್ಥರು

ಜಮೀನಿಗೆ ನುಗ್ಗಿದ್ದ ಕದೀಮರು 80 ಸಾವಿರ ಬೆಲೆ ಬಾಳುವ ಶುಂಠಿಯನ್ನು ಕದ್ದು ಪರಾರಿಯಾಗಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಳೆದುಕೊಂಡು ಕಂಗಾಲಗಿರುವ ಟೆಬೇಟಿಯನ್ ರೈತ.

ರಾತ್ರೋರಾತ್ರಿ ಜಮೀನಿಗೆ ನುಗ್ಗಿ 8 ಚೀಲ ಶುಂಠಿ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಬೈಲುಕುಪ್ಪೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲಿಸರು ಗಸ್ತು ಹೆಚ್ಚಿಸುವಂತೆ ರೈತರು ಮನವಿ ಮಾಡಿದ್ದಾರೆ.

Exit mobile version