Site icon PowerTV

ವಿದ್ಯುತ್ ತಂತಿ ತಗುಲಿ ಕುರಿಗಾಹಿ ಸಾವು

ಶಿವಮೊಗ್ಗ : ವಿದ್ಯುತ್‌ ತಂತಿ ತಗುಲಿ ಕುರಿಗಾಹಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮಲ್ಲಿಕಾರ್ಜುನ ನಗರ 3ನೇ ಕ್ರಾಸ್ ಬಳಿಯ ರಾಗಿಗುಡ್ಡದಲ್ಲಿ ನಡೆದಿದೆ.

ಚಟ್ನಹಳ್ಳಿ ನಿವಾಸಿ  ಗಿರೀಶ್ (27) ಮೃತು ಕುರಿಗಾಹಿ. ರಾಗಿಗುಡ್ಡದ ಚಾನಲ್‌ ಸಮೀಪ ಶುಕ್ರವಾರ ಮಧ್ಯಾಹ್ನ ಗಿರೀಶ ಕುರಿ ಮೇಯಿಸುತ್ತ ಬಂದಿದ್ದ. ಈ ವೇಳೆ ವಿದ್ಯುತ್‌ ಕಂಬದ ತಂತಿ ತಗುಲಿ ಕರೆಂಟ್‌ ಶಾಕ್‌ ಹೊಡೆದಿದೆ ಎಂದು ಶಂಕಿಸಲಾಗಿದೆ.

ರಾತ್ರಿಯಾದರು ಗಿರೀಶ ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬದವರು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆ ಹುಡುಕಾಟ ನಡೆಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Exit mobile version