Site icon PowerTV

ಬಸ್​ಗಳು ಮುಖಾಮುಖಿ ಡಿಕ್ಕಿ: 6 ಮಂದಿ ಸಾವು, 20 ಮಂದಿ ಗಾಯ

ಮಹಾರಾಷ್ಟ್ರ : ಬುಲ್ದಾನಾ ಜಿಲ್ಲೆಯಲ್ಲಿ ಮಧ್ಯರಾತ್ರಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಮಲ್ಕಾಪುರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 53ರ ನಂದೂರ್ ನಾಕ ಫ್ಲೈ ಓವರ್‌ನಲ್ಲಿ ನಸುಕಿನ 2.30ರ ಸುಮಾರಿಗೆ ಎರಡು ಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಬಾಲಾಜಿ ಟ್ರಾವೆಲ್ಸ್ ಎಂಬ ಸಂಸ್ಥೆಗೆ ಸೇರಿದ ಒಂದು ಬಸ್, ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ವಾಪಸ್ ಹೋಗುತ್ತಿತ್ತು. ರಾಯಲ್ ಟ್ರಾವೆಲ್ಸ್‌ಗೆ ಸೇರಿದ ಮತ್ತೊಂದು ಬಸ್ ನಾಶಿಕಂ ಕಡೆ ತೆರಳುತ್ತಿತ್ತು.

3 ಮಹಿಳೆಯರು ಸೇರಿ 6 ಮಂದಿ ಮೃತ

ನಂದೂರ್ ನಾಕ ಬಳಿ ನಾಸಿಕ್ ಕಡೆಗೆ ತೆರಳುತ್ತಿದ್ದ ಬಸ್, ಟ್ರಕ್ ಒಂದನ್ನು ಓವರ್‌ಟೇಕ್ ಮಾಡಿ ಮುಂದೆ ಹೋದಾಗ ಎದುರು ಬದಿಯಿಂದ ಬಂದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

Exit mobile version