Site icon PowerTV

ಪಟಾಕಿ ಗೋದಾಮಿನಲ್ಲಿ ಸ್ಫೋಟ : 9 ಸಾವು, 10 ಮಂದಿ ಗಾಯ

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಪಟಾಕಿ ಸಂಗ್ರಹಿಸಿಡುವ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 9 ಜನರು ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ಮೃತರನ್ನು ಗೋಡೌನ್ ಮಾಲೀಕ ರವಿ, ಅವರ ಪತ್ನಿ ಜಯಶ್ರೀ, ಅವರ ಪುತ್ರಿ ರುತಿಕ್ಕ ಮತ್ತು ಮಗ ರುತೀಶ್ ಎಂದು ಗುರುತಿಸಲಾಗಿದೆ.

ಗೋಡೌನ್ ಬಳಿ ರೆಸ್ಟೋರೆಂಟ್ ನಡೆಸುತ್ತಿದ್ದ ರಾಜೇಶ್ವರಿ, ವೆಲ್ಡಿಂಗ್ ಶಾಪ್ ಹೊಂದಿದ್ದ ಇಬ್ರಾಹಿಂ, ವಾಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸರಸು ಮತ್ತು ಜೇಮ್ಸ್ ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇದೀಗ ಕುಸಿದ ಕಟ್ಟಡದೊಳಗೆ ಸಿಲುಕಿರುವ ಜನರನ್ನು ರಕ್ಷಿಸುವ ಮತ್ತು ಸ್ಥಳದಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Exit mobile version