Site icon PowerTV

ಮೋದಿ ವಿಶ್ವನಾಯಕನಾಗಲು ಸಾಧ್ಯವಿಲ್ಲ : ಸುಧೀರ್ ಕುಮಾರ್

ಉಡುಪಿ : ದೇಶದಲ್ಲಿ ದೌರ್ಜನ್ಯ ನಡೆಯುತ್ತಿರುವಾಗ ಪ್ರಧಾನಿ ಮೋದಿ ವಿಶ್ವ ನಾಯಕನಾಗಲು ಸಾಧ್ಯವಿಲ್ಲ. ಬಿಜೆಪಿ ಮನುಷ್ಯ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಣಿಪುರ ಜಿಲ್ಲಾ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ವಾಗ್ದಾಳಿ ನಡೆಸಿದರು.

ಮಣಿಪುರ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜಧರ್ಮ ಪಾಲಿಸು ಎಂಬ ವಾಜಪೇಯಿ ಗುಣ ಮೋದಿಗೆ ಅಧಿಕಾರದ ಕೊನೆಯ ಹಂತದಲ್ಲಾದರೂ ಬರಲಿ. ಮೈಥೇಯಿ-ಕುಕಿ-ನಾಗಾ ಸಮುದಾಯದಲ್ಲಿ ಎಷ್ಟು ಸಂಖ್ಯೆ ಇದೆ ಗೊತ್ತಿಲ್ಲ. ಆದರೆ, ಚುನಾವಣೆ ಉದ್ದೇಶದಿಂದ ಬಿಜೆಪಿ ಸರ್ಕಾರ ಮೈಥೇಯಿ ಪರವಾಗಿ ನಿಂತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಉಡುಪಿ ಘಟನೆ ಪ್ರಸ್ತಾಪಿಸಿದ ಮರೋಳಿ, ಯಶ್‌ಪಾಲ್ ಎಂಬ ವ್ಯಕ್ತಿ ಉಡುಪಿಗೆ ಒಳ್ಳೆಯ ಶಾಸಕನಾಗಲು ಸಾಧ್ಯವಿಲ್ಲ. ಪೊಲೀಸರನ್ನು ಮೀರಿ ನೀವು ಜಡ್ಜ್​ಮೆಂಟ್ ಕೊಡಬೇಡಿ. ಉಡುಪಿ ಘಟನೆಯಲ್ಲಿ ರಾಜಕೀಯ ಮಾಡುವುದು ನಿಲ್ಲಿಸಿ ನೈತಿಕತೆ ಇದ್ರೆ ಮಣಿಪುರ ದೌರ್ಜನ್ಯವನ್ನು ನಿಲ್ಲಿಸಲು ಪ್ರಧಾನಿಗೆ ಹೇಳಿ ಎಂದರು.

Exit mobile version