Site icon PowerTV

ಅಕ್ಕಿ ರಫ್ತು ನಿಷೇಧ : ಅಕ್ಕಿಗಾಗಿ ಮುಗಿಬೀಳುತ್ತಿರುವ ಅಮೇರಿಕಾ ಜನತೆ

ಅಮೇರಿಕ: ಭಾರತದಿಂದ ಬಿಳಿ ಅಕ್ಕಿಯ ರಫ್ತು ನಿಷೇಧಿಸಿದ ಹಿನ್ನೆಲೆಯಲ್ಲಿ ಅಮೆರಿಕಾದಾದ್ಯಂತ ಅಕ್ಕಿ ಕೊರತೆಯ ಭಯ ಹೆಚ್ಚಾಗಿದೆ. ಮುಖ್ಯವಾಗಿ ಸೋನಾ ಮಸೂರಿ ಅಕ್ಕಿ ಕೊಳ್ಳಲು ಕಿರಾಣಿ ಅಂಗಡಿಗಳಲ್ಲಿ ಜನ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ನಟ ಕಿಚ್ಚನ ಮೇಲೆ ಹುಚ್ಚು ಅಭಿಮಾನ: ರಕ್ತದಲ್ಲೇ ಸುದೀಪ್ ಚಿತ್ರ ಬಿಡಿಸಿದ ಫ್ಯಾನ್​

ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 10 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕೇಳಿದರೂ ಸೋನಾ ಮಸೂರಿ ಅಕ್ಕಿ ಸಿಗುತ್ತಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಸಾಮಾನ್ಯ ಬೆಲೆಗಿಂತ ಮೂರು ಪಟ್ಟು ಹೆಚ್ಚು ಕೊಟ್ಟು ಅಕ್ಕಿ ಖರೀದಿ ಮಾಡುತ್ತಿದ್ದಾರೆ.

ರಫ್ತು ನಿಷೇಧವು ದೇಶೀಯ ಲಭ್ಯತೆ ಮತ್ತು ಭಾರತದ ಗ್ರಾಹಕರಿಗೆ ಕಡಿಮೆ ಬೆಲೆಗೆ ಅಕ್ಕಿ ನೀಡುವ ಉದ್ದೇಶವನ್ನು ಹೊಂದಿದೆ. ಆದರೆ ಅಮರಿಕ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

‘ಪ್ರಮುಖವಾಗಿ ಸೋನಾ ಮಸೂರಿ ಅಕ್ಕಿಗೆ ಹೆಚ್ಚು ಬೇಡಿಕೆ ಬಂದಿದೆ. ಕಿರಾಣಿ ಅಂಗಡಿಗಳಲ್ಲಿ ಭಾರತದಿಂದ ಬಂದ ಯಾವ ರೀತಿಯ ಅಕ್ಕಿ ದೊರೆಯುವುದೋ ಅದನ್ನು ಖರೀದಿಸುತ್ತಿದ್ದಾರೆ. ಅಲ್ಲದೆ ರಫ್ತು ನಿಷೇಧದಿಂದ ಉತ್ತಮ ದರ್ಜೆಯ ಬಾಸ್ಮತಿ ಅಕ್ಕಿ ದೊರೆಯದೇ ದೊರೆತ ಅಕ್ಕಿಯನ್ನು ಬಳಸುವಂತಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂದು ಕಿರಾಣಿ ಅಂಗಡಿಯೊಂದರ ಮಾಲೀಕರು  ಹೇಳಿದ್ದಾರೆ.

Exit mobile version