Site icon PowerTV

ಇಂದು ಮಡಿವಾಳರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ಇಂದು  ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಘಟಕ ಉದ್ಘಾಟನೆಯನ್ನು ಯಶವಂತಪುರದ ವೈ. ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಅನುಮಾನಕ್ಕೆಡೆ ಮಾಡಿಕೊಟ್ಟ ಅಧಿಕಾರಿಗಳ ಮೌನ!

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಮಡಿವಾಳರ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಶಿವಯೋಗಾನಂದಪುರಿ ಸ್ವಾಮಿಜಿ, ಮೂಡಬಿದರೆಯ ಕರಂಜೆ ಮಠದ ಮುಕ್ತಾನಂದ ಮಹಾಸ್ವಾಮಿ, ಚಿತ್ರದುರ್ಗ ಮಠದ ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗು ಹಿರಿಯರು ಭಾಗವಹಿಸಲಿದ್ದಾರೆ.

Exit mobile version