Site icon PowerTV

ಸುಧಾಕರ್​ಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು

ಚಿಕ್ಕಬಳ್ಳಾಪುರ : ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ನಮ್ಮೂರ ಹುಡುಗ, ಅವರ ಬಗ್ಗೆ ನನಗೆ ಗೌರವವಿದೆ. ನೀವು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಮುಂದಿನ ಬಾರಿ ವಿಧಾನಸೌಧಕ್ಕೆ ಬರ್ತೀರಾ? ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಮಾಡಿದ್ರೆ ಮತ್ತೆ 5 ವರ್ಷ ಕಷ್ಟಪಡಬೇಕಾಗುತ್ತೆ ಎಂದು ಟಾಂಗ್ ನೀಡಿದ್ದಾರೆ.

ಇನ್ನು ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎಂಬ ಸುಧಾಕರ್ ಸವಾಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾಕೆ ಸುಧಾಕರ್ ಅವ್ರೇ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ? ಎರಡು ತಿಂಗಳ ಹಿಂದೆಯಷ್ಟೇ ನಿಮ್ಮನ್ನ ಸೋಲಿಸಿದ್ದೇನೆ. ಮತ್ತೆ ಯಾಕೆ ಬರಬೇಕು. ನೀವು ಬೇಕಾದ್ರೆ 5 ವರ್ಷ ಆದ್ಮೇಲೆ ಪಕ್ಷೇತರರಾಗಿ ಬಂದು ಸ್ಪರ್ಧೆ ಮಾಡಿ ಅಂತ ಕುಟುಕಿದ್ದಾರೆ.

Exit mobile version