Site icon PowerTV

ತಿರಸ್ಕಾರವಾದ ಜನರ ಬಗ್ಗೆ ನನ್ನ ಮುಂದೆ ಹೇಳ್ಬೇಡಿ : ಎಂ.ಬಿ ಪಾಟೀಲ್ ಗರಂ

ವಿಜಯಪುರ : ರಾಜ್ಯದಲ್ಲಿ ಒಂದು ಸಮುದಾಯದ ಪರವಾಗಿ ಆಡಳಿತ ನಡೆಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಮಾತು ಕೇಳಿ ಆಡಳಿತ ನಡೆಸುತ್ತಿಲ್ಲ. ಬಿಜೆಪಿಯನ್ನ ಜನರೇ ತಿರಸ್ಕರಿಸಿದ್ದಾರೆ. ತಿರಸ್ಕಾರವಾದ ಜನರ ಬಗ್ಗೆ ನನ್ನ ಮುಂದೆ ಹೇಳಲು ಹೋಗ್ಬೇಡಿ ಎಂದು ಗರಂ ಆಗಿದ್ದಾರೆ.

ಇನ್ನು ಆಲಮಟ್ಟಿ ಡ್ಯಾಂ, ಕೃಷ್ಣಾನದಿಗೆ ಸಿಎಂ ಬಾಗೀನ ಅರ್ಪಿಸುವ ವಿಚಾರವಾಗಿ ಮಾತನಾಡಿ, ಮೊದಲು ಆಲಮಟ್ಟಿ ಡ್ಯಾಂ ತುಂಬಲಿ. ಮೊನ್ನೆ ಕೆಲ ದಿನ ಒಳ ಹರಿವು ಹೆಚ್ಚಿತ್ತು. ಈಗ ಒಳ ಹರಿವು ಕಡಿಮೆಯಾಗಿದೆ, ಆತುರ ಬೇಡ. ಈಗ ಕೆನಾಲ್‌ಗಳಿಗೆ ನೀರು ಹರಿಸುವ ಕೆಲಸ ಮಾಡ್ತಿದ್ದೇವೆ. ಈ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ನಡೆಯಬೇಕಿದೆ. KBJNL ಎಂಡಿ ಜೊತೆಗೆ ಮಾತನಾಡಿದ್ದೇನೆ. ಬಾಗೀನ ಅರ್ಪಣೆಗೆ ಆತುರ ಬೇಡ ಎಂದು ಹೇಳಿದ್ದಾರೆ.

Exit mobile version