Site icon PowerTV

ಅಕ್ರಮ ಗಣಿಗಾರಿಕೆ: ಅನುಮಾನಕ್ಕೆಡೆ ಮಾಡಿಕೊಟ್ಟ ಅಧಿಕಾರಿಗಳ ಮೌನ!

ದೊಡ್ಡಬಳ್ಳಾಪುರ: ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮ ಗಣಿಗಾರಿಕೆಯನ್ನು ಎಗ್ಗಿಲ್ಲದೇ ನಡೆಯುತ್ತಿದ್ದರು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವ ಘಟನೆ ಐಯ್ಯನಹಳ್ಳಿಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಅಕ್ಕಿ ರಫ್ತು ನಿಷೇಧ : ಅಕ್ಕಿಗಾಗಿ ಮುಗಿಬೀಳುತ್ತಿರುವ ಅಮೇರಿಕಾ ಜನತೆ

ಸುಮಾರು ಆರೇಳು ತಿಂಗಳುಗಳಿಂದ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಐಯ್ಯನಹಳ್ಳಿಯಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಇಲ್ಲಿನ ನಿಸರ್ಗ ಸಂಪತ್ತಿನ ಅಕ್ರಮ ಕಲ್ಲುಗಣಿಗಾರಿಗೆ ಎಗ್ಗಿಲ್ಲದೇ ನಡೆಯುತ್ತಿದೆ, ನಿತ್ಯ ಹಿಟಾಚಿ ಕಂಪ್ರೆಸರ್‌ ಯಂತ್ರಗಳ ಬಳಕೆ ಸದ್ದು ಇಲ್ಲಿನ ಜನರ ನಿದ್ದೆಗೆಡಿಸಿದೆ.

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ  ಅಧಿಕಾರಿಗಳಾಗಲಿ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Exit mobile version