Site icon PowerTV

ನಾಳೆಯಿಂದ ಲಂಕಾ ಪ್ರೀಮಿಯರ್ ಲೀಗ್

ಬೆಂಗಳೂರು : ಭಾರತದಲ್ಲಿ ಐಪಿಎಲ್ ಟೂರ್ನಿ ಜನಪ್ರಿಯತೆ ಪಡೆದುಕೊಂಡ ನಂತರ ವಿದೇಶಗಳಲ್ಲೂ ಟಿ20 ಕ್ರಿಕೆಟ್ ಸಖತ್ ಟ್ರೆಂಡ್ ಆಗಿದೆ.

ಲಂಡನ್‌ನಲ್ಲಿ ಇತ್ತೀಚೆಗಷ್ಟೇ ಟಿ-20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿ ನಡೆಯಿತು. ನಂತರ ಅಮೇರಿಕದಲ್ಲಿ ಮೇಜರ್ ಕ್ರಿಕೆಟ್ ಲೀಗ್ ಟೂರ್ನಿ ಆಯೋಜನೆಗೊಂಡಿದ್ದು, ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ 4ನೇ ಆವೃತ್ತಿ ಆಯೋಜನೆಗೊಂಡಿದೆ.

ಐಪಿಎಲ್ (IPL) ಟೂರ್ನಿ ಮಾದರಿಯಲ್ಲೇ ಲಂಕಾ ಟೂರ್ನಿಯೂ ನಡೆಯಲಿದ್ದು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಜುಲೈ 30 ರಿಂದ ಆಗಸ್ಟ್ 21ರ ವರೆಗೆ ಲಂಕಾದ ಕೊಲಂಬೊ ಮತ್ತು ಕ್ಯಾಂಡಿ ಕ್ರಿಕೆಟ್ ಅಂಗದಲ್ಲಿ ನಡೆಯಲಿದೆ.

ಆಗಸ್ಟ್ 20ರಂದು ಫೈನಲ್ ಪಂದ್ಯ ನಡೆಯಲಿದೆ ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಆ.21 ರಂದು ಫೈನಲ್ ಪಂದ್ಯ ಮುಂದೂಡಲಾಗುತ್ತದೆ. ಅದಕ್ಕಾಗಿಯೇ ಒಂದು ದಿನ ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ ಎಂದು ಎಲ್‌ಪಿಎಂ ಸಮಿತಿ ತಿಳಿಸಿದೆ.

Exit mobile version