Site icon PowerTV

ಕಾರಂಜಾಗೆ ಹರಿದುಬಂದ ಗಂಗೆ, ಮಲ್ಲಿಕಾರ್ಜುನ ದೇವಸ್ಥಾನ ಮುಳಗಡೆ

ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದ್ದು, ಕಾರಂಜಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದಿದೆ.

ಜಲಾಶಯದಿಂದ ನೀರು ಹೊರಬಿಡಲಾಗುತ್ತಿದ್ದು, ಸುತ್ತಲಿನ ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ. ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ಕಣಜಿ-ಕಟ್ಟಿತೂಗಾವ ರಸ್ತೆ ನಡುವಿನ ಸಂಪರ್ಕ ಕಡಿತವಾಗಿದೆ.

ರಸ್ತೆ ಮೇಲೆ ನೀರು ಹರಿದುಬಂದ ಪರಿಣಾಮ ಸಂಪರ್ಕ ಕಡಿತಗೊಂಡಿದ್ದು, ರೈತರು ತಮ್ಮ ಜಮೀನಿಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಅಷ್ಟೇ ಅಲ್ಲದೇ ರಸ್ತೆ ಪಕ್ಕದಲ್ಲೆ ಇರುವ ಮಲ್ಲಿಕಾರ್ಜುನ ದೇವಸ್ಥಾನವೂ ಸಹ ಮುಳಗಡೆ ಆಗಿದ್ದು, ದೇವನಿಗೂ ಜಲಕಂಟಕ‌ ತಪ್ಪಲ್ಲಾ ಎಂಬಂತಾಗಿದೆ.

ಪ್ರತಿ ವರ್ಷ ಜಲಾಶಯದಿಂದ ನೀರು ಬಿಟ್ಟಾಗೊಮ್ಮೆ ಈ ಪರಿಸ್ಥಿತಿ ಎದುರಾಗುತ್ತಿದ್ದು, ರಸ್ತೆ ಮೇಲೆ ಓವರ್ ಬ್ರಿಡ್ಜ್ ಕಟ್ಟಿಕೊಟ್ಟರೆ ನಮ್ಮ‌ ಜಮೀನುಗಳಿಗೆ ಹಾಗು ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲ ಅಗುತ್ತೆ. ಪ್ರತಿವರ್ಷ ನಾವು ಹೇಳ್ತಿವಿ ಅಧಿಕಾರಿಗಳಯ ಸುಮ್ಮನೇ ಕೇಳಿ ಸುಮ್ಮನಾಗುತ್ತಿದ್ದಾರೆ ಎಂದು ಕಟ್ಟುತುಗಾಂವ  ರೈತರ ಅಸಮಾಧಾನ ಹೊರಹಾಕುತ್ತಿದ್ದಾರೆ.

Exit mobile version