ಬೆಂಗಳೂರು : 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ ಎಂದರು.
ಕೆಲ ಸೌಲಭ್ಯ ಆಗಬೇಕಿದೆ ಅಷ್ಟೆ. ಈಗಾಗಲೇ ಅಧಿಕಾರಿಗಳಿಗೆ ನಾವು ಸೂಚನೆ ಕೊಟ್ಟಿದ್ದೇವೆ. 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಾನು ಹೋಗಿ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತನಾಡುತ್ತೇನೆ ತಿಳಿಸಿದರು.
ಇತ್ತೀಚೆಗೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ @siddaramaiah ಅವರು ಇಂದು ಮಂಡ್ಯ ಸಮೀಪದ ಅಮರಾವತಿ ಹೋಟೆಲ್ ಬಳಿ (ಬೆಂಗಳೂರಿನಿಂದ 93 km ಅಂತರ) ರಸ್ತೆ ಪರಿಶೀಲನೆ ನಡೆಸಿ, ಅಪಘಾತ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದರು. pic.twitter.com/EaRX1EvksG
— CM of Karnataka (@CMofKarnataka) July 29, 2023
ನವೆಂಬರ್ ಬಳಿಕ ಹೆಚ್ಚುವರಿ ಕಾಮಗಾರಿ
ಅಪಘಾತಗಳ ತಡೆಗೆ ಹೈವೇ ಪಕ್ಕ ಸ್ಪೀಡ್ ಮೀಟರ್ ಅಳವಡಿಸಲಾಗಿದೆ. 10 ಕಿ.ಮೀ. ಅಂತರದಲ್ಲಿ ಮೀಟರ್ ಅಳವಡಿಸಿದರೆ ಅನುಕೂಲ ಆಗಲಿದೆ. ಎನ್ಹೆಚ್ಎಐ (NHAI) ಅಧಿಕಾರಿಗಳ ಜೊತೆ ನಮ್ಮ ಅಧಿಕಾರಿಗಳು ಸಭೆ ಮಾಡಿದ್ದಾರೆ. ಎಕ್ಸ್ಪ್ರೆಸ್ವೇಯಲ್ಲಿ ವೇಗದ ಮಿತಿ ಇರಲಿಲ್ಲ. ಇದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿತ್ತು. ಜೂನ್ನಲ್ಲಿ ಹೆಚ್ಚು ಅಪಘಾತವಾಗಿದ್ದವು. ಜುಲೈನಲ್ಲಿ ಅಪಘಾತ ಪ್ರಮಾಣ ಇಳಿಕೆಯಾಗಿದೆ. ಹೆಚ್ಚುವರಿ ಕಾಮಗಾರಿ ಕೆಲಸ ನವೆಂಬರ್ ಬಳಿಕ ಆರಂಭವಾಗುತ್ತೆ ಎಂದು ಹೇಳಿದರು.



Pinco az domaini aktiv işləyir. Hər gün yeni oyunlarla tanış olmaq üçün pinco az səhifəsinə keç. Pinco casino bonusları hər həftə yenilənir.
Pinco betdə canlı mərclər aktivdir.