Site icon PowerTV

ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು, ಚಾಲಕನ ಮೃತದೇಹ ಪತ್ತೆ

ಮಂಡ್ಯ : ತಾಲೂಕಿನ ತಿಬ್ಬನಹಳ್ಳಿ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆಯಲ್ಲಿ ಕಾರು ಬಿದ್ದಿದ್ದು, ಚಾಲಕನ ನಾಪತ್ತೆ ಪ್ರಕರಣದ ಹಿನ್ನೆಲೆ ಘಟನಾ ಸ್ಥಳ ಸಮೀಪದ ವಿಸಿ ನಾಲೆಯ ಸೇತುವೆ ಬಳಿ ಇಂದು ಪತ್ತೆಯಾದ ಮೃತದೇಹ.

ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದ್ದ ಕಾರು ತಡೆಗೋಡೆಗಳು ಇಲ್ಲದ ಕಾರಣ ಈ ಅವಘಡ ಸಂಭವಿಸಿತ್ತು. ನಿನ್ನೆ ಮುಳುಗಿದ್ದ ಕಾರನ್ನು ಹೊರತೆಗೆಯಲಾಗಿತ್ತು, ಆದರೆ ನೀರಿನ ರಭಸಕ್ಕೆ ಚಾಲಕ ಲೋಕೆಶ್ ಕೊಚ್ಚಿ ಹೋಗಿದ್ದರು.

ಇದನ್ನು ಓದಿ : ರೀಲ್ಸ್ ಹುಚ್ಚು: ಐ-ಫೋನ್ ಖರೀದಿಗೆ 8 ತಿಂಗಳ ಮಗುವನ್ನು ಮಾರಿದ ತಂದೆತಾಯಿ!

ಆದರೆ ಲೋಕೆಶ್ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ.

ಮೃತದೇಹ ಮತ್ತೆಯಾಗದ ಹಿನ್ನೆಲೆ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಂದ ನಿನ್ನೆ ರಾತ್ರಿ 8:30ರ ವರೆಗೂ ಹುಡುಕಾಟವನ್ನು  ನಡೆಸಲಾಗಿತ್ತು. ಸಿಬ್ಬಂದಿಗಳ ಕಾರ್ಯಚರಣೆ ಬಳಿಕ ಇಂದು ಬೆಳಗ್ಗೆ 7:45ರ ಸುಮಾರಿಗೆ ಘಟನಾ ಸ್ಥಳ ಸಮೀಪದ ಸೇತುವೆ ಬಳಿ ಪತ್ತೆಯಾಗಿರುವ ಲೋಕೆಶ್ ಮೃತದೇಹ.

ಮುಗಿಲು ಮುಟ್ಟಿದ ಲೋಕೆಶ್ ಕುಟುಂಬಸ್ಥರ ಆಕ್ರಂದನ.

Exit mobile version