Site icon PowerTV

ಶಾಲಾ ಗೋಡೆ ಕುಸಿತ: ಮಳೆಯಲ್ಲಿಯೇ ಪಾಠ ಕೇಳಿದ ವಿದ್ಯಾರ್ಥಿಗಳು

ಹಾಸನ : ರಾಜ್ಯದಲ್ಲಿ ಮುಂದುವರೆದ ವರುಣಾನ ಅರ್ಭಟ, ನಿರಂತರ ಮಳೆಯಿಂದಾಗಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿರುವ ಪರಿಣಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಜಗ್ಗಲಿ ಮೇಲೆ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ನಿರಂತರ ಮಳೆಯಿಂದಾಗಿ ಸಂಪೂರ್ಣ ಶಿಥಿಲವಾಗಿದ್ದು, ಮಂಗಳವಾರ ತಡರಾತ್ರಿ ಶಾಲೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಕುಸಿದು ಬಿದ್ದ ಕಟ್ಟಡದ ಆವರಣದಲ್ಲಿ ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದೆ.

ಇದನ್ನು ಓದಿ : ನಿಮ್ಮ ದ್ರೋಹಕ್ಕೆ ಬಿಜೆಪಿಯನ್ನು ಜನರು ಮನೆಗೆ ಕಳಿಸಿದ್ದಾರೆ : ಪ್ರವೀಣ್ ಶೆಟ್ಟಿ

ಶಾಲಾ ಗೋಡೆ ಕುಸಿಯುವ ಭೀತಿಯಿಂದ ಅನಾಹುತ ಸಂಭವಿಸುವ ಮುನ್ನ ನೂತನ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಶಿಕ್ಷಕರು ಹಾಗೂ ಪೋಷಕರು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

Exit mobile version