Site icon PowerTV

ಹಾವೇರಿಯಲ್ಲಿ ರಣಮಳೆಗೆ ಮತ್ತೋರ್ವ ಬಲಿ

ಹಾವೇರಿ : ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ರಣಮಳೆಗೆ ಮತ್ತೋರ್ವ ಬಲಿಯಾಗಿದ್ದಾನೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಕಲ್ಲಪ್ಪ ಅಂಗರಗಟ್ಟಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಮಕಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ.

ಮನೆ ಸೋರುತ್ತಿರುವುದಕ್ಕೆ ಮೇಲ್ಛಾವಣಿಗೆ ಟಾರ್ಪಲ್ ಹಾಕುತ್ತಿದ್ದಾಗ, ಒಮ್ಮೆಲೆ ಮನೆಯ ಮೆಲ್ಛಾವಣಿ ಸಂಪೂರ್ಣ ಕುಸಿದು ತಲೆಗೆ ತೀವ್ರ ಪೆಟ್ಟಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಹಾವೇರಿ ಜಿಲ್ಲಾಸ್ಪತ್ರೆಗೆ ಕಲ್ಲಪ್ಪರನ್ನ ದಾಖಲಿಸಿದ್ರು ಬದುಕುಳಿಯಲಿಲ್ಲ. ಕಾಗಿನೆಲೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಪಳ್ಳಿ ಜಲಾಶಯ ಸಂಪೂರ್ಣ

ನಿರಂತರ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಜಲಾಶಯ ತುಂಬಿದ್ದು, ಮೈದುಂಬಿ ಹರಿಯುತ್ತಿದೆ. ದಟ್ಟ ಕಾಡಿನ ಮಧ್ಯೆ ಚಂದ್ರಪಳ್ಳಿ ಕೆರೆ ನಯನ ಮನೋಹರವಾಗಿ ಕಾಣಿಸುತ್ತಿದ್ದು, ನೋಡುಗರ ಮನ ಸೆಳೆದಿದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಚಂದ್ರಪಳ್ಳಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

Exit mobile version