Site icon PowerTV

ಖುಷ್ಬೂ ಕೊಟ್ಟಿರುವ ಹೇಳಿಕೆ ಸರಿಯಲ್ಲ : ಶಾಸಕ ಘಂಟಿಹೊಳೆ

ಉಡುಪಿ : ರಾಷ್ಟ್ರೀಯ ಮಹಿಳಾ‌ ಆಯೋಗ ಸದಸ್ಯೆ ಖುಷ್ಬೂ ಸುಂದರ್ ಹೇಳಿಕೆ‌ ವಿರುದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಸಮಾಧಾನಗೊಂಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೌಚಾಲಯದ ‌ರಹಸ್ಯ ಕ್ಯಾಮೆರಾ ಇಟ್ಟಿಲ್ಲ ಎಂದು ಖುಷ್ಬೂ ಸುಂದರ್ ಕೊಟ್ಟಿರುವ ಹೇಳಿಕೆ‌ ಸರಿಯಲ್ಲ. ಖುಷ್ಬೂ ಬಿಜೆಪಿಗೆ ಬಂದ ತಕ್ಷಣ ಹಿಂದೂ ಸಮಾಜದ ಅಧ್ಯಯನ ಪೂರ್ತಿ ಗೊತ್ತಿದೆ ಅನ್ನುವುದಲ್ಲ. ಮೊದಲು ಸ್ಪಷ್ಟ ತನಿಖೆ ನಡೆಸಿ ವರದಿ ನೀಡಬೇಕಿತ್ತು ಎಂದಿದ್ದಾರೆ.

ಯಾರೂ ಕೂಡಾ ಹಿಡನ್ ಕ್ಯಾಮೆರಾ ಬಗ್ಗೆ ಮಾತನಾಡಿಲ್ಲ. ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ನಡೆದಿದೆಯಾ? ಇಲ್ಲವಾ ಅಂತ ತನಿಖೆ‌ಯಾಗಬೇಕಿದೆ. ತಾವು ಇಲ್ಲಿಗೆ ಬಂದು ತನಿಖೆ‌ ನಡೆಸಿದ್ದೀರಿ. ಹಾಗಾದ್ರೆ, ಶೌಚಾಲಯ ವಿಡಿಯೋ‌ ಚಿತ್ರೀಕರಣ ಕುರಿತು ಅಲ್ಲಿ‌ ಏನಾಗಿತ್ತು ಅನ್ನುವುದು ಬಹಿರಂಗಪಡಿಸಿ‌ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಾಜ್ಯದ 57 ಖೈದಿಗಳಿಗೆ ಬಿಡುಗಡೆ ಭಾಗ್ಯ!

ಅರ್ಧಂಭರ್ದ ಹೇಳಿಕೆ ನೀಡಿದ್ದಾರೆ

ಪ್ರಕರಣದ ಕುರಿತು ಅರ್ಧಂಭರ್ದ ಹೇಳಿಕೆ ನೀಡಿ ಹೊರಟು ಹೋಗಿದ್ದು ಸರಿಯಲ್ಲ. ಪ್ರಕರಣವನ್ನು ‌ಯಾವುದೇ ಒತ್ತಡಗಳಿಲ್ಲದೆ ತನಿಖೆ‌ ನಡೆಸಲು ಅವಕಾಶ‌ ನೀಡಬೇಕು. ಇಲ್ಲವಾದಲ್ಲಿ‌ ರಾಷ್ಟ್ರೀಯ ತನಿಖಾ‌ದಳಕ್ಕೆ ಒಪ್ಪಿಸುವ ಕೆಲಸವಾಗಬೇಕು ಆ ಮೂಲಕ ಸತ್ಯಸತ್ಯಾತೆ ತಿಳಿಯಲಿದೆ. ಪ್ರಕರಣ ತೀವ್ರತೆ ಗೊತ್ತಿಲ್ಲದೆ ತೀರ್ಮಾನಕ್ಕೆ‌ ಬರುವುದು ಅಪಾಯ ಎಂದು ಬೇಸರಿಸಿದ್ದಾರೆ.

Exit mobile version