Site icon PowerTV

ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕಳ್ಳರು

ಮಂಡ್ಯ : ದುಷ್ಕರ್ಮಿಗಳು ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ಸಾದೋಳಲು ಗ್ರಾಮದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 1.30ರ ವೇಳೆಯಲ್ಲಿ ಘಟನೆ ನಡೆದಿದೆ. ಸಾದೋಳಲು ಗ್ರಾಮದ ಚಿನ್ನಪ್ಪ ಎಂಬುವವರು ಮದ್ದೂರಿನ ಕೋರ್ಟ್ ಗೆ ತೆರಳಿದ್ದರು. ಈ ವೇಳೆ ಮನೆ ಬೀಗ ಒಡೆದು ನುಗ್ಗಿದ್ದ ಕಳ್ಳರ ಗುಂಪು, ಮನೆಯಲ್ಲಿದ್ದ ಬೀರೂವಿನ ಬೀಗ ಮುರಿದು ಸುಮಾರು 10 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ಇದನ್ನು ಓದಿ : ಇದೇನು ಪ್ರಜಾಪ್ರಭುತ್ವವೋ? ಸಿದ್ದರಾಮಯ್ಯರ ತುಘಲಕ್ ದರ್ಬಾರೋ? : ಬಿಜೆಪಿ ಕಿಡಿ

ಕೆಲಸ ಮುಗಿಸಿ ಮನೆಗೆ ವಾಪಸ್ ಆದ ಬಳಿಕ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮದ್ದೂರು ಠಾಣೆ ಇನ್ಸ್ಪೆಕ್ಟರ್ ಎಸ್. ಸಂತೋಷ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version