Site icon PowerTV

ನಾಳೆ ಮಣಿಪುರಕ್ಕೆ “ಇಂಡಿಯಾ” ಸಂಸದರ ಭೇಟಿ

ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಸಂಸದರ ತಂಡ ಜು. 29 ಮತ್ತು 30ರಂದು ಎರಡು ದಿನಗಳಕಾಲ ಮಣಿಪುರಕ್ಕೆ ಭೇಟಿ ನೀಡಲಿದೆ. 20ಕ್ಕೂ ಹೆಚ್ಚು ಸಂಸದರು ನಿಯೋಗದಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ಕೆಎಸ್​ಆರ್ಟಿಸಿ ಬಸ್ ಬಾಡಿಗೆ ಭಾರಿ ಹೆಚ್ಚಳ! : ಪ್ರತಿ ಕಿ.ಮೀಟರ್​ ಗೆ 2ರಿಂದ 5 ವರೆಗೆ…

ಮಣಿಪುರ ಭೇಟಿ ನೀಡುವ ನಿಯೋಗವು ಅಲ್ಲಿನ ಪರಿಸ್ಥಿತಿಯ ಬಗ್ಗೆ ಈ ತಂಡ ಅವಲೋಕನ ನಡೆಸಲಿದೆ. ನಿಯೋಗವು ಮಣಿಪುರದ ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡಲಿದೆ, ಅಲ್ಲಿನ ವಿವಿಧ ಸಮುದಾಯಗಳನ್ನು ಭೇಟಿ ಮಾಡಲಿದೆ ಇದೇ ವೇಳೆ ಕೆಲವು ಪರಿಹಾರ ಶಿಬಿರಗಳಿಗೂ ಭೇಟಿ ನೀಡಲಿದೆ.

ಲೋಕಸಭೆ ಚುನಾವಣೆ ಸಮೀಪದಲ್ಲೇ “ಇಂಡಿಯಾ” ತಂಡವು ಮಣಿಪುರಕ್ಕೆ ಭೇಟಿಯ ನಿಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ, ಮಣಿಪುರ ಭೇಟಿಯ ಬಳಿಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಪ್ರಯತ್ನಗಳನ್ನು ನಡೆಯಲಿದೆ ಎಂದು ಹೇಳಲಾಗುತ್ತಿದೆ.

Exit mobile version