Site icon PowerTV

ಸಿಲಿಕಾನ್ ಸಿಟಿ ಜನರೇ, ನೀರು ಕುಡಿಯೋಕು ಮುನ್ನ ಎಚ್ಚರ.. ಎಚ್ಚರ..!

ಬೆಂಗಳೂರು : ಸಿಲಿಕಾನ್ ಸಿಟಿ ಜನ್ರೇ ನೀವು ನೀರು ಕುಡಿಯೋಕು ಮುನ್ನ ಸ್ವಲ್ಪ ಎಚ್ಚರ ವಹಿಸಿ. ಯಾಕಂದ್ರೆ, ಬೆಂಗಳೂರಿನ ಬಹುತೇಕ ಕಡೆ ಕುಡಿಯುವ ನೀರು ಯೋಗ್ಯವಲ್ಲ ಎಂಬ ಮಾಹಿತಿಯನ್ನ ಬಿಬಿಎಂಪಿ ಆರೋಗ್ಯ ಇಲಾಖೆ ವರದಿ ಮಾಡಿದೆ.

ಬೆಂಗಳೂರಿನ 599 ನೀರಿನ ಮಾದರಿ ಪೈಕಿ 59 ನೀರಿನ ಮಾದರಿಗಳು ಕುಡಿಯೋಕೆ ಯೋಗ್ಯವೇ ಇಲ್ಲದ್ದಾಗಿದೆ. ಅಂದರೆ ಶೇಕಡಾ 9ರಷ್ಟು ಮಾದರಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಬಿಬಿಎಂಪಿ ಅರೋಗ್ಯ ಇಲಾಖೆ ವರದಿ ಮಾಡಿದೆ.

ಇನ್ನೂ ಈ ಪೈಕಿ ಬೆಂಗಳೂರು ದಕ್ಷಿಣ ಭಾಗದಲ್ಲೇ 31 ನೀರಿನ ಮಾದರಿಗಳು ಕಲುಷಿತಗೊಂಡಿವೆಯಂತೆ. ಬಿಬಿಎಂಪಿ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸುತ್ತಿದೆ. ಆರ್​ಓ ಪ್ಲಾಂಟ್, ಜಲಮಂಡಳಿ ಪೂರೈಕೆ ಮಾಡುವ ನೀರು, ಆಯ್ದ ಕೆಲ ಹೊಟೇಲ್​ಗಳ ನೀರು ಮತ್ತು ಸಾರ್ವಜನಿಕ ಟ್ಯಾಪ್ ಗಳ ಸ್ಯಾಂಪಲ್ ಗಳನ್ನ ಇಟ್ಟುಕೊಂಡು ಪರೀಕ್ಷೆ ನಡೆಸಿದೆ. ಈ ತಿಂಗಳ ಪರೀಕ್ಷೆಯಲ್ಲಿ 59 ನೀರಿನ ಮಾದರಿಗಳು ಯೋಗ್ಯವಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Exit mobile version