Site icon PowerTV

ಬಾವಿಗೆ ಹಾರಿ ಶಾಲಾ ವಾಚ್​ ಮ್ಯಾನ್ ಆತ್ಮಹತ್ಯೆಗೆ ಶರಣು

ಉಡುಪಿ : ಅದಮಾರು ಮಠ ಸಂಚಾಲಿತ ಪೂರ್ಣಪ್ರಜ್ಞ ಶಾಲೆಯ ರಾತ್ರಿ ಕವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಎರ್ಮಾಳು ನಿವಾಸಿ ನವೀನ್ ಬಂಗೇರಾ (57) ಮೃತ ವ್ಯಕ್ತಿ. ಇಂದು ಬೆಳಗ್ಗೆ ಶಾಲೆಯಿಂದ ನೂರು ಮೀಟರ್ ದೂರದ ಯಶೋಧರವರ ವಾಸದ ಮನೆ ಬಳಿಯ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

ಮನೆಯವರು ಬೆಳಗ್ಗೆ 6.30ರ ಸುಮಾರಿನಲ್ಲಿ ಹೊರಗಡೆ ಬಂದಾಗ ಬಾವಿಕಟ್ಟೆಯಲ್ಲಿ ಮೃತ ನವೀನ್ ಅವರ ಪರ್ಸ್, 50, 100 ಹಾಗೂ 500 ರೂ. ನೋಟುಗಳು ಚೆಲ್ಲಿತ್ತು. ಕೆಲವು ನೋಟುಗಳನ್ನು ಹರಿದು ಎಸೆಯಲಾಗಿತ್ತು. ನವೀನ್ ಬಾವಿಗೆ ಹಾರಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಸ್ವಸ್ಥರಂತೆ ವರ್ತಿಸುತ್ತಿದ್ದ ನವೀನ್

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರ್ಸನ್ನು ಪರಿಶೀಲಿಸಿದಾಗ ಅದರಲ್ಲಿ ಅವರ ಫೋಟೋ ಮತ್ತು ಅದಮಾರು ಸಂಸ್ಥೆಯ ಪತ್ರ ಸಿಕ್ಕಿದೆ. ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದರವರು ಬಾವಿಯಲ್ಲಿದ್ದ ಹುಡುಕಾಡಿದಾಗ ನವೀನ್‌ ಮೃದೇಹ ಸಿಕ್ಕಿದೆ. ಅವಿವಾಹಿತರಾದ ನವೀನ್ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version