Site icon PowerTV

ಸಚಿವರ ದುರಹಂಕಾರ ಅಂತ ಯಾರು ಹೇಳಿದ್ರು : ಶಿವಲಿಂಗೇಗೌಡ

ಬೆಂಗಳೂರು : ಸಚಿವರ ದುರಹಂಕಾರ ಅಂತ ಯಾರು ಹೇಳಿದ್ರು? ಯಾವ ಶಾಸಕರು ನಿಮಗೆ ದೂರು ಕೊಟ್ಟಿದ್ದಾರೆ ಹೇಳಿ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾನ್ಸವರ್ ವಿಚಾರದಲ್ಲಿ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕರು ಏನು ಹೇಳ್ತಾರೆ ಮಾಡಿಕೊಡಿ ಅಂತ ಎಂದರು.

ನಮ್ಮ ಸರ್ಕಾರ ಉಚಿತ ಗ್ಯಾರಂಟಿ ಪಾಸ್ ಮಾಡಿಲ್ವಾ? ಬಜೆಟ್ ಒಪ್ಪಿಗೆ ಆಗಿದೆಯಲ್ಲ. ಗ್ಯಾರಂಟಿ ಅನುಷ್ಠಾನಕ್ಕೆ ಬಂದಿದೆಯಲ್ಲ. ನಮಗೆ ಯಾವುದೇ ಅಸಮಾಧಾನವಿಲ್ಲ. ಶಾಸಕರಲ್ಲಿ ಯಾವ ಅಸಮಾಧಾನವಿದೆ ಎಂದು ಹೇಳಿದರು.

ಇದನ್ನೂ ಓದಿ : ಯಾವ್ ಪತ್ರ, ಏನ್ ಲೆಟರ್.. ಎಲ್ಲಾ ಬೋಗಸ್ : ಡಿ.ಕೆ ಶಿವಕುಮಾರ್

ಲೆಟರ್ ಯಾರು ಬರೆದಿದ್ದಾರೆ?

ಲೆಟರ್ ಯಾರು ಬರೆದಿದ್ದಾರೆ? ಅದರಲ್ಲಿ ಏನಿದೆ? ಸಭೆ ಕರೆಯುವಂತೆ ಹೇಳಿದ್ದೆವು. ಅದಕ್ಕೆ ಸಿಎಂ ಸಭೆ ಕರೆದಿದ್ದಾರೆ. ಆ ಪತ್ರವೇ ಅದಲ್ಲ. ಈಗ ಲೆಟರ್ ಕೊಟ್ಟಿದ್ದಾರೆ ಅಂತ ಫೇಕ್ ಮಾಡಿದ್ದಾರೆ. ಮೊನ್ನೆ ಇನ್ನು ಬಜೆಟ್ ಮಂಡಿಸಿದ್ದಾರೆ. ಬಜೆಟ್ ಅನುಮೋದನೆ ಈಗ ಆಗಿದೆ. ಅನುದಾನದ ಪ್ರಶ್ನೆಯೇ ಬರುವುದಿಲ್ಲವಲ್ಲ. 54 ಸಾವಿರ ಕೋಟಿ ಹಣ ಇಟ್ಟಿದ್ದಾರೆ. ಹಿಂದಿದ್ದ ಸರ್ಕಾರ ಎರಡೂವರೆ ಲಕ್ಷ ಕೋಟಿ ಕ್ರಿಯಾ ಯೋಜನೆ ಬಿಟ್ಟಿತ್ತು. ಯಾರಾದ್ರೂ ಅನುದಾನ ಬಂದಿಲ್ಲ ಅಂತ ಹೇಳಿದ್ದಾರಾ? ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು.

Exit mobile version