Site icon PowerTV

ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ : ಗೃಹಸಚಿವ ಪರಮೇಶ್ವರ್​ ಪ್ರತಿಕ್ರಿಯೆ!

ಬೆಂಗಳೂರು: ಈಗಾಗಲೇ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಸ್ನೇಹಿತರ ನಡುವೆ ಆಗಾಗ ಕೆಲವು ಘಟನೆಗಳು ನಡೆಯುತಲೇ ಇರುತ್ತವೆ, ಈ ವಿಚಾರವನ್ನು ಎಲ್ಲಿಗೋ ತೆಗೆದುಕೊಂಡು ಹೋಗೋದು ಸರಿಯಲ್ಲ ಎಂದು ಉಡುಪಿ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

ಇದನ್ನೂ ಓದಿ: ದೆಹಲಿ ಸುಗ್ರೀವಾಜ್ಞೆಯ ವಿರುದ್ಧ ಹೋರಾಟಕ್ಕೆ ಬೆಂಬಲಿಸುವಂತೆ ದೇವೇಗೌಡರಿಗೆ ಮನವಿ 

ನಗರದಲ್ಲಿ ಮಾತನಾಡಿದ ಅವರು, ಕೆಲವು ವಿಚಾರ ಎಲ್ಲಿಗೋ ತೆಗೆದುಕೊಂಡು ಹೋಗೋದು ಸರಿಯಲ್ಲ ಈಗಾಗಲೇ ಮೂವರು ವಿದ್ಯಾರ್ಥಿನಿಯರನ್ನ ಕಾಲೇಜು ಆಡಳಿತ ಸಸ್ಪೆಂಡ್‌ ಮಾಡಿದೆ. ಇದಕ್ಕೆಲ್ಲ ನಾವು ಮಧ್ಯಪ್ರವೇಶ ಮಾಡಬಾರದು, ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆಗುತ್ತೆ, ಸತ್ಯಾಸತ್ಯತೆ ಹೊರ ಬರುತ್ತೆ ಇದೆಲ್ಲವನ್ನು ಮೀರಿದ ಘಟನೆಯಾದರೇ ನಾವು ಹೋಗಬಹುದು ಎಂದು ಅವರು ಹೇಳಿದರು.

Exit mobile version