Site icon PowerTV

ವಿದ್ಯಾರ್ಥಿನಿಯರ ಮೊಬೈಲಲ್ಲಿ ವಿಡಿಯೋ ಸಿಕ್ಕಿಲ್ಲ: ಮಹಿಳಾ ಆಯೋಗ ಸದಸ್ಯೆ ಖುಷ್ಬು

ಉಡುಪಿ: ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆಗೆ ಸಂಬಂಧಿಸಿ ಸದ್ಯ ಹರಿದಾಡುತ್ತಿರುವ ವಿಡಿಯೋಗಳೆಲ್ಲ ಫೇಕ್ ಆಗಿದ್ದು, ಈವರೆಗೆ ಆರೋಪಿತ ವಿದ್ಯಾರ್ಥಿನಿಯರು ಮಾಡಿರುವ ವಿಡಿಯೋದ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಸಂಸದರಿಗೆ ಬೆತ್ತಲೆ ವೀಡಿಯೋ ಕಾಲ್​ !

ಘಟನೆ ಬಗ್ಗೆ ತನಿಖೆಗೆ ಆಗಮಿಸಿರುವ ಅವರು ಬುಧವಾರ ಸಂಜೆ ಎಸ್ಪಿ ಅಕ್ಷಯ್ ಮಚ್ಚಿಂದ್ರ ಮತ್ತು ಡಿಸಿ ಡಾ.ವಿದ್ಯಾಕುಮಾರಿ ಅವರೊಂದಿಗೆ ಐಬಿಯಲ್ಲಿ ಮಾಹಿತಿ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೊಲೀಸರು ಆರೋಪಿತ ವಿದ್ಯಾರ್ಥಿನಿಯರ 3 ಮೊಬೈಲ್ ಗಳಿಂದ ಸುಮಾರು 40 ಗಂಟೆಗಳಷ್ಟು ಡೇಟಾ ರಿಕವರಿ ಮಾಡಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದ ವಿಡಿಯೋ ಫೋಟೋಗಳು ಸಿಕ್ಕಿಲ್ಲ. ಆದ್ದರಿಂದ ಈ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ವಿಧಿವಿಜ್ಞಾನ ಲ್ಯಾಬ್‌ಗೆ ಮೊಬೈಲ್ ಕಳುಹಿಸಿಕೊಡಲಾಗಿದೆ ಸಾಕ್ಷ್ಯ ಲಭ್ಯವಾದರಷ್ಟೇ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯ ಎಂದಿದ್ದಾರೆ.

Exit mobile version