Site icon PowerTV

ಸಣ್ಣಪುಟ್ಟ ಸಮಸ್ಯೆಗಳಿರಬಹುದು : ಶರಣಬಸಪ್ಪ ದರ್ಶನಾಪುರ

ಬೆಂಗಳೂರು : ಸಣ್ಣಪುಟ್ಟ ಸಮಸ್ಯೆಗಳಿರಬಹುದು, ಇವತ್ತು ನಡೆಯುವ ಸಭೆಯಲ್ಲಿ ಸಂಪೂರ್ಣವಾಗಿ ಗೊತ್ತಾಗುತ್ತೆ. ಡೀಲ್ ಗಳೆಲ್ಲ  ಸುಳ್ಳು. ಬಿ.ಆರ್ ಪಾಟೀಲ್ ಈಗ ಎಸ್ಪಿ ಅವರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ವಿಕಾಸಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಲ್ ಪಿ(CLP) ಸಭೆ ಕರೆದಿದ್ದಾರೆ. ಅನಿವಾರ್ಯ ಕಾರಣದಿಂದ ಸಿಎಲ್ ಪಿ(CLP) ಸಭೆ ಮುಂದುಡಿಕೆ ಆಗಿತ್ತು. ಹೀಗಾಗಿ, ಸಭೆ ಕರೆಯಿರಿ ಅಂತ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅನುದಾನ ಕೇಳಬೇಡಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಈಗಾಗಲೇ ಬಜೆಟ್ ಮಂಡನೆ ಆಗಿದೆ. ಆ ಬಜೆಟ್ ಪುಸ್ತಕದಲ್ಲೇ ಈಗಾಗಲೇ ಅನುದಾನದ ಬಗ್ಗೆ ಇದೆ. ಎಲ್ಲಾ ಗ್ಯಾರೆಂಟಿಗೂ ದುಡ್ಡನ್ನು ಒದಗಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಯವರು ನಿರುದ್ಯೋಗಿ ಆಗಿದ್ದಾರೆ : ಸಚಿವ ಪ್ರಿಯಾಂಕ್ ಖರ್ಗೆ

ದುಡ್ಡು ಯಾವ ಇಲಾಖೆಗೆ ಎಷ್ಟು ಬೇಕು

ಇಲಾಖೆಗೆ ಅನುದಾನ ಬಂದ ಮೇಲೆ ಬೇರೆ ಇಲಾಖೆಗೆ ಕೊಡಬೇಕಾಗುತ್ತೆ. ಹೀಗಾಗಿ, ಅಭಿವೃದ್ಧಿಗೆ ಹಣ ಒದಗಿಸಿಲ್ಲ ಎಂಬ ಸವಾಲು ಬರಲ್ಲ. ದುಡ್ಡು ಯಾವ ಇಲಾಖೆಗೆ ಎಷ್ಟು ಬೇಕು ಅನ್ನೋದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನೋಡೋಣ ಇವತ್ತು ಸಭೆ ಕರೆದಿದ್ದಾರೆ. ಏನು ಆಗಿದೆ ಅಂತ ಚರ್ಚೆ ಮಾಡ್ತೀವಿ ಎಂದು ತಿಳಿಸಿದರು.

Exit mobile version