Site icon PowerTV

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ : ಪ್ರಧಾನಿ ಮೋದಿ

ರಾಜಸ್ಥಾನ : ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ.

ರಾಜಸ್ಥಾನದ ಸಿಕಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ನಡೆಸಿದ ಬಳಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಪರೀಕ್ಷಾ ಪತ್ರಿಕೆಗಳ ಸೋರಿಕೆಯಲ್ಲಿ ಭಾಗಿಯಾಗಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಅದೇ ವೇಳೆ ಇತ್ತೀಚೆಗೆ ಸಚಿವ ಸಂಪುಟದಿಂದ ವಜಾಗೊಂಡ ರಾಜಿಂದರ್ ಗುಢಾ ಅವರು ಗೆಹ್ಲೋಟ್ ಸರ್ಕಾರದ ಭ್ರಷ್ಟಾಚಾರದ ವಿಚಾರ ಇದರಲ್ಲಿದೆ ಎಂದು ಹೇಳುವ ‘ರೆಡ್ ಡೈರಿ’ ಬಗ್ಗೆ ಉಲ್ಲೇಖಿಸಿದ್ದಾರೆ.

‘ರೆಡ್ ಡೈರಿ’ ರಾಜಸ್ಥಾನದ ಉತ್ಪನ್ನ

ರಾಜಸ್ಥಾನದಲ್ಲಿ ಸರ್ಕಾರ ನಡೆಸುವ ಹೆಸರಿನಲ್ಲಿ ಕಾಂಗ್ರೆಸ್ ಕಳ್ಳರ ಅಂಗಡಿ ಮತ್ತು ಸುಳ್ಳಿನ ಮಾರುಕಟ್ಟೆಯನ್ನು ನಡೆಸುತ್ತಿದೆ. ಇದರ ಇತ್ತೀಚಿನ ಉತ್ಪನ್ನವೆಂದರೆ ರಾಜಸ್ಥಾನದ ‘ರೆಡ್ ಡೈರಿ’. ಈ ಡೈರಿಯಲ್ಲಿ ಕಾಂಗ್ರೆಸ್​ನ ಕರಾಳ ಕೃತ್ಯಗಳನ್ನು ಪಟ್ಟಿ ಮಾಡಲಾಗಿದೆ ಅಂತ ಹೇಳಲಾಗಿದೆ ಎಂದಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಗೆಹ್ಲೋಟ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಕಾಲುಗಳಲ್ಲಿ ಕೆಲವು ಸಮಸ್ಯೆಗಳಿವೆ. ಇಂದು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು ಆದರೆ, ಆ ತೊಂದರೆಯಿಂದ ಬರಲಾಗಲಿಲ್ಲ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

Exit mobile version