Site icon PowerTV

ದಾವಣಗೆರೆ ಸಂಸದರಿಗೆ ಬೆತ್ತಲೆ ವೀಡಿಯೋ ಕಾಲ್​ !

ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು ಹನಿಟ್ರ್ಯಾಪ್​​​ಗೆ ಒಳಪಡಿಸಿ, ಹಣ ಕೀಳಲು ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಡೀಸೆಲ್ ಕದಿಯಲು ಬಂದವನ್ನ ಕೊಂದ ಲಾರಿ ಚಾಲಕರು

ಸಂಸದರು ಇತ್ತೀಚೆಗೆ ಬೆಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದು, ನಗರದ ಯುಬಿ ಸಿಟಿಯ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾಗ ಅವರರಿಗೆ ಅಶ್ಲೀಲ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡಿ ಸೆಕ್ಸ್ ಟಾರ್ಷನ್ ಖೆಡ್ಡಾದಲ್ಲಿ ಕೆಡವಲು ಪ್ರಯತ್ನಿಸಲಾಗಿದೆ.

ಸಿದ್ದೇಶ್ವರ ಅವರ ದೂರಿನ ಮೇರೆಗೆ ಪೊಲೀಸರು ಕಾರ್ಯಪ್ರೌವೃತ್ತರಾದ ಕೂಡಲೇ ವಂಚಕರು ತಮ್ಮ ಸುಲಿಗೆ ತಂತ್ರವನ್ನು ಅಲ್ಲಿಗೇ ನಿಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಗಳಲ್ಲಿ ಸಿದ್ದೇಶ್ವರ ಅವರಿಗೆ ಬಂದಿದ್ದ ವಿಡಿಯೋ ಕಾಲ್, ರಾಜಸ್ಥಾನದಿಂದ ಬಂದಿದ್ದೆಂದು ತಿಳುದುಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾತ್ರಿ ಸುಮಾರು 10:20ರ ಸುಮಾರಿಗೆ ಬಂದಿದ್ದ ಆ ಮೆಸೇಜ್​​ನಲ್ಲಿ ಹಾಯ್, ಹೌ ಆರ್ ಯೂ ಎಂದು ಬರೆಯಲಾಗಿತ್ತು. ಯಾವುದೋ ಹೊಸ ನಂಬರ್​ನಿಂದ ಬಂದಿದ್ದ ಮೆಸೇಜ್ ಆಗಿದ್ದರಿಂದ ಸಂಸದರು ಇದಕ್ಕೆ ಉತ್ತರ ಕೊಡಲು ಹೋಗಿಲ್ಲ ಎಂದು ತಿಳಿದುಬಂದಿದೆ.

Exit mobile version