Site icon PowerTV

ಚಿಕಿತ್ಸೆಗೆ ಹಣವಿಲ್ಲದೆ ಪರದಾಡಿದ ರೋಗಿಗೆ ಆಪರೇಷನ್ ಮಾಡಿದ ಶಾಸಕ ಡಾ.ರಂಗನಾಥ್!

ಕುಣಿಗಲ್ : ಚಿಕಿತ್ಸೆಗೆ ಹಣವಿಲ್ಲದೆ ಸಹಾಯ ಕೋರಿ ಬಂದಿದ್ದ ತಾಲೂಕಿನ ಬಡ ವ್ಯಕ್ತಿಗೆ ತಾವೇ ಸ್ವತಃ ಮಂಡಿ ನೋವಿನ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಾಸಕ ಡಾ. ರಂಗನಾಥ್ ಅವರು ಮಾನವೀಯತೆ ಮೆರೆದಿದ್ದು ಸ್ವತಃ ವೈದ್ಯರಾಗಿ ತಮ್ಮ ಕರ್ತವ್ಯ ನಿಷ್ಟೆತೋರಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರ ಮೊಬೈಲಲ್ಲಿ ವಿಡಿಯೋ ಸಿಕ್ಕಿಲ್ಲ: ಮಹಿಳಾ ಆಯೋಗ ಸದಸ್ಯೆ ಖುಷ್ಬು

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬುವವರು ಹಲವಾರು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ವಿಚಾರವಾಗಿ ಶಾಸಕರಿಗೆ ಮನವಿ ಮಾಡಿ, ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿದ್ದರು, ಬಡ ವ್ಯಕ್ತಿಯ ಈ ಮನವಿಗೆ ತುರ್ತಾಗಿ ಸ್ಪಂದಿಸಿದ ಶಾಸಕರು, ರೋಗಿಯನ್ನು ಪರೀಕ್ಷಿಸಿ, ರೋಗಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ನಿರ್ಧರಿಸಿದರು.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುವ ಸಲುವಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡರು. ರೋಗಿಗೆ ಉಚಿತವಾಗಿ ವೈದ್ಯರ ತಂಡಗಳನ್ನು ಒಟ್ಟುಗೂಡಿಸಿಕೊಂಡು, ಬುಧವಾರ ತಾವೇ ಖುದ್ದು ಮಂಡಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

Exit mobile version