Site icon PowerTV

‘ಯಾರೂ ಮಾತನಾಡಂಗಿಲ್ಲ..!’ ಅಂತ ಡಿಸೈಡ್ ಆಗಿದೆ : ಡಿ.ಕೆ ಶಿವಕುಮಾರ್

ಬೆಂಗಳೂರು : ‘ಯಾರೂ ಮಾತನಾಡಂಗಿಲ್ಲ..!’ ಅಂತ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರೂ ಅಸಮಧಾನಗೊಂಡಿಲ್ಲ. ಶಾಸಕಾಂಗ ಪಕ್ಷದ ಸಭೆ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.

ಯಾರೂ ದೂರು ಕೊಟ್ಟಿಲ್ಲ, ಸಭೆ ನಡೆಸಿ ಅಂತ ಹೇಳಿದ್ದಾರೆ. ಅನುಧಾನ ಹಂಚಿಕೆ, ವರ್ಗಾವಣೆ ಬಗ್ಗೆ ಹೇಳಿದ್ದಾರೆ. 6% ಅಷ್ಟೇ ವರ್ಗಾವಣೆಗೆ ಅವಕಾಶ ಇದೆ. ಎಲ್ಲಾ ಶಾಸಕರು ಖುಷಿಯಾಗಿ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಸಚಿವರ ದುರಹಂಕಾರ ಅಂತ ಯಾರು ಹೇಳಿದ್ರು : ಶಿವಲಿಂಗೇಗೌಡ

ಮಾಧ್ಯಮದವ್ರು ಸೃಷ್ಠಿ ಮಾಡ್ತಿದ್ದೀರಿ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಶಾಸಕಾಂಗ ಪಕ್ಷದ ಸಭೆ ಬಹಳ ಸೌರ್ಹದತೆಯಿಂದ ನಡೆಯಿತು. ಎಲ್ಲ ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ. ಎಲ್ಲರೂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯಾರಿಗೂ ಅಸಮಧಾನ ಇಲ್ಲ. ಅಸಮಧಾನದ ಬಗ್ಗೆ ಚರ್ಚೆಯೇ ಆಗಿಲ್ಲ. ಮಾಧ್ಯಮದವ್ರು ಸೃಷ್ಠಿ ಮಾಡ್ತಿದ್ದೀರಿ. ಬಿಜೆಪಿಯವ್ರು ಹೇಳ್ತಾರೆ, ಅದನ್ನು ನೀವು ಪ್ರಚಾರ ಮಾಡ್ತೀರಿ ಎಂದು ಹೇಳಿದರು.

Exit mobile version