Site icon PowerTV

ಕೃಷ್ಣಾನದಿ ಪಾತ್ರದಲ್ಲಿ ಮೊಸಳೆಗಳು ಪ್ರತ್ಯಕ್ಷ: ನದಿ ಸುತ್ತ ಓಡಾಡದಂತೆ ಜಿಲ್ಲಾಡಳಿತ ಸೂಚನೆ!

ರಾಯಚೂರು: ಕೃಷ್ಣಾ ನದಿಪಾತ್ರದಲ್ಲಿ ಮೊಸಳೆಗಳ ಹಿಂಡು ಪತ್ಯಕ್ಷವಾಗಿದ್ದು, ಅತ್ಕೂರು ಗ್ರಾಮದ ಸುತ್ತಮುತ್ತಲಿನ ಸ್ಥಳೀಯರು ನದಿದಂಡೆಗೆ ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಇದನ್ನೂ ಓದಿ: ಅಕ್ರಮ ಸಂಬಂಧದ ಅನುಮಾನ ಹೆಂಡತಿಯನ್ನು ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ!

ರಾಯಚೂರು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ, ಜಿಲ್ಲೆಯ ಹಲವು ನದಿಗಳು ತುಂಬಿ ತುಳುಕುತ್ತಿದೆ, ಇದೇ ವೇಳೆ, ಒಂದೆಡೆ ನೆರೆ ಆತಂಕ ಸೃಷ್ಟಿಯಾಗಿದ್ದು ಮತ್ತೊಂದೆಡೆ ಮೊಸಳೆಗಳ ಪ್ರತ್ಯಕ್ಷದಿಂದ ಅತ್ಕೂರು ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರಿಗೆ ಜೀವಭಯ ಉಂಟಾಗಿದೆ.

ಕೃಷ್ಣನದಿಗೆ ನೀರು ಹರಿಬಿಟ್ಟಾಗ ನದಿಪಾತ್ರದಲ್ಲಿ ಮೊಸಳೆಗಳ ಹಿಂಡು ಬರೋದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ‌. ಅತ್ಕೂರ ಗ್ರಾಮದ ಬಳಿ ಮೊಸಳೆಗಳ ಹಿಂಡು ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರು ನದಿ ದಂಡೆಗೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ.

Exit mobile version