Site icon PowerTV

ಗೃಹಲಕ್ಷ್ಮೀ ಹೆಸರಿನಲ್ಲಿ ಮಕ್ಮಲ್ ಟೋಪಿ : ವೃದ್ಧೆಯ ಚಿನ್ನಾಭರಣ ಕಸಿದು ಎಸ್ಕೇಪ್

ರಾಮನಗರ : ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಚಿನ್ನಾಭರಣ ಕಳವು ಮಾಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ವೃದ್ಧೆಯ ಚಿನ್ನಾಭರಣ ಕಸಿದು ಖದೀಮ ಎಸ್ಕೇಪ್ ಆಗಿದ್ದಾನೆ. ಸಾವಿತ್ರಮ್ಮ (62) ವಂಚನೆಗೊಳಗಾದ ವೃದ್ಧ ಮಹಿಳೆ. ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ನಿವಾಸಿ ಸಾವಿತ್ರಮ್ಮ.

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಮಗನನ್ನು ನೋಡಲು ವೃದ್ಧೆ ಬಂದಿದ್ದಳು. ಒಂಟಿಯಾಗಿದ್ದ ವೃದ್ಧೆಯನ್ನು ಯಾಮಾರಿಸಿ ಚಿನ್ನಾಭರಣ ಖದೀಮ ದೋಚಿದ್ದಾನೆ. ಗೃಹಲಕ್ಷ್ಮೀ ನೊಂದಣಿ ಮಾಡಿಸಿದ್ದೀಯಾ ಎಂದು ಖದೀಮ ಕೇಳಿದ್ದಾನೆ. ಈ ವೇಳೆ ವೃದ್ಧೆ ಇಲ್ಲ ಎಂದಿದ್ದಾರೆ. ಬಳಿಕ ಪೋಸ್ಟ್ ಆಫಿಸ್ನಿಂದ ಹಣ ಬರುವ ಹಾಗೆ ಮಾಡಿಸುತ್ತೇನೆಂದು ನಂಬಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಕಣ್ಣು ಪರೀಕ್ಷೆ ಮಾಡಿಸಬೇಕು ಚಿನ್ನಾಭರಣ ತೆಗೆಯುವಂತೆ ಹೇಳಿ ಮೋಸ ಮಾಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡೂವರೆ ಲಕ್ಷ ಬೆಲೆಬಾಳುವ 40 ಗ್ರಾಂ ಚಿನ್ನಾಭರಣ ಕಳವಾಗಿದೆ.

Exit mobile version