Site icon PowerTV

ಇಂದಿನಿಂದ 3 ದಿನಗಳ ಕಾಲ ಯುವ ಕಾಂಗ್ರೆಸ್ ಸಮಾವೇಶ: ರಾಹುಲ್ ಗಾಂಧಿ ಭಾಗಿ

ಬೆಂಗಳೂರು: ‘ಬೆಹರ್ ಭಾರತ್ ಕಿ ಬುನಿಯಾದ್ ‘(ಉತ್ತಮ ಭಾರತದ ಬುನಾದಿ)ಗಾಗಿ ಯುವ ರಾಷ್ಟ್ರೀಯ ಸಮಾವೇಶವನ್ನು ಭಾರತೀಯ ಯುವ ಕಾಂಗ್ರೆಸ್‌ನಿಂದ ಜು.26 ರಿಂದ ಮೂರು ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: ಪೊಲೀಸರಿಗೆ ಸಿಹಿಸುದ್ದಿ: ಹುಟ್ಟುಹಬ್ಬಕ್ಕೆ ರಜೆ ಭಾಗ್ಯ!

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಿಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ತರೀಖ್ ಅನ್ವರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಸಮಾರೋಪ ಸಮಾರಂಭಕ್ಕೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.

ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಉಸ್ತುವಾರಿ ಮತ್ತು ಎಐಸಿಸಿ ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲಾವಾರು.ಜಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ನೇತೃತ್ವದಲ್ಲಿ ಸಭೆ ನಡೆಯಲಿದೆ.

Exit mobile version