Site icon PowerTV

ಉಡುಪಿ ಘಟನೆ ಬಹಳ ಸಣ್ಣದು : ಡಾ.ಜಿ ಪರಮೇಶ್ವರ

ಬೆಂಗಳೂರು : ಉಡುಪಿ ಘಟನೆ ಬಹಳ ಸಣ್ಣದು, ಅದಕ್ಕೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಎಂಬ ಹೇಳಿಕೆ ಮೂಲಕ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಬಿಜೆಪಿ ನಾಯಕರಿಗೆ ಆಹಾರವಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಬಿಜೆಪಿಯವರು ಯಾಕೆ ರಾಜಕಾರಣ ಮಾಡ್ತಿದ್ದಾರೆ? ಅವರಿಗೆ ಬೇರೆ ಕೆಲಸ ಇಲ್ಲ ಅಂತ ಕಾಣಿಸುತ್ತದೆ. ಬರದ ಬಗ್ಗೆ ಪ್ರವಾಹದ ಬಗ್ಗೆ ಬಿಜೆಪಿಯವರು ಮಾತನಾಡ್ತಿಲ್ಲ. ಬೇರೆ ಕೆಲಸ ಇಲ್ಲ ಅಂತ ಕಾಣಿಸುತ್ತದೆ. ಅದಕ್ಕೆ ಸಣ್ಣ ಸಣ್ಣ ವಿಷಯಗಳಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಇದೆಲ್ಲ ನಡೆಯುತ್ತಿರಲಿಲ್ವಾ?

ಪ್ರಿನ್ಸಿಪಾಲ್ ಇದಾರೆ, ಕಾಲೇಜು ಸಮಿತಿ ಇದೆ. ದೂರು ಇಲ್ಲ. ಏನೂ ಇಲ್ಲ. ರಾಜಕೀಯ ಮಾಡುವುದನ್ನು ಬಿಜೆಪಿಯವರು ಮೊದಲು ನಿಲ್ಲಿಸಬೇಕು. ಹಿಂದೆಲ್ಲ ಕಾಲೇಜುಗಳಲ್ಲಿ ಇದೆಲ್ಲ ನಡೆಯುತ್ತಿರಲಿಲ್ವಾ? ಬೇರೆ ಬೇರೆ ಕೆಲಸಗಳೆಲ್ಲ ಇದೆ. ಇಂಥ ಸಣ್ಣ ಸಣ್ಣ ರಾಜಕೀಯ ಮಾಡ್ತಿದ್ದಾರೆ. ಅದನ್ನು ಬಿಜೆಪಿಯವರು ಬಿಡಬೇಕು ಎನ್ನುವ ಮೂಲಕ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಶಾಸಕರು ಪತ್ರ ಬರೆದಿರುವುದರಲ್ಲಿ ತಪ್ಪೇನಿದೆ? ಇದೆಕ್ಕೆಲ್ಲ ಯಾಕೆ ಇಷ್ಟು ಜಾಸ್ತಿ ಮಹತ್ವ ಕೊಡಲಾಗ್ತಿದೆ? ಎಂದು ಡಾ.ಜಿ ಪರಮೇಶ್ವರ ಪ್ರಶ್ನೆ ಮಾಡಿದ್ದಾರೆ.

Exit mobile version