Site icon PowerTV

ಹಿಜಾಬ್ ವಿವಾದಕ್ಕಿಂತ ಇದು ಹೇಯ ಕೃತ್ಯ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ಹಿಜಾಬ್ ವಿವಾದಕ್ಕಿಂತ ಇದು ಹೇಯ ಕೃತ್ಯ. ಈ ಬಗ್ಗೆ ಪ್ರಶ್ನಿಸುವವರನ್ನು ಧಮನಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಏಕೈಕ ಘಟನೆ ಅಲ್ಲ, ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ. ಕಾಲೇಜಿನ ಸಂತ್ರಸ್ಥರ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಹಿಂದೂ ಹುಡುಗಿಯರ ನಗ್ನ ಶರೀರ ನೋಡಬಹುದಾ? : ರವಿಕುಮಾರ್ ಕಿಡಿ

ಇದು ಕೇರಳ ಸ್ಟೋರಿ ಮಾದರಿ

ವಿಡಿಯೋ ಎಲ್ಲೆಲ್ಲಿ ಹರಿದಾಡಿದೆ ಎಂಬುದನ್ನು ತನಿಖೆ ಮಾಡಬೇಕು. ಮುಸ್ಲಿಂ ಯುವತಿಯರ ಜೊತೆ ಮುಸ್ಲಿಂ ಯುವಕರು ಒಳಗೊಂಡಿದ್ದಾರೆ. ಇದು ಉಡುಪಿಗೆ ಕಳಂಕ. ಪೊಲೀಸ್ ಇಲಾಖೆಯ ವರ್ತನೆ ಸರಿ ಇಲ್ಲ. ಇದು ಕೇರಳ ಸ್ಟೋರಿ ಮಾದರಿಯ ಘಟನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ಬಿಜೆಪಿ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರಕರಣ ಸಂಬಂಧ ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡಬೇಕು. ಉಡುಪಿ ಎಸ್‌ಪಿ ನೇತೃತ್ವದಲ್ಲಿ ತನಿಖೆ ಬೇಡ ಎಂದು ಆಗ್ರಹಿಸಿದ್ದಾರೆ.

Exit mobile version