Site icon PowerTV

ಮಳೆ ನೀರನ್ನು ಕುಡಿದು ದಣಿವಾರಿಸಿಕೊಂಡ ಹುಲಿರಾಯ

ಚಾಮರಾಜನಗರ : ಜಿಲ್ಲಾದ್ಯಂತ ಕಳೆದ 3 ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಬಂಡೀಪುರ ಅರಣ್ಯ ಪ್ರದೇಶದಲ್ಲೂ ಬಿರುಸಿನ ಮಳೆಯಾಗುತ್ತಿದೆ.

ಧೋ ಸುರಿಯುವ ಮಳೆ ನೀರನ್ನು ಕುಡಿದು ಹುಲಿಯೊಂದು ದಣಿವಾರಿಸಿಕೊಂಡ ಅಪರೂಪದ ದೃಶ್ಯ ಬಂಡೀಪುರದಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಈ ಅಪರೂಪದ ದೃಶ್ಯ ಸೆರೆಯಾಗಿದೆ.

ಸಫಾರಿಯಲ್ಲಿ ಸೆರೆಯಾದ ದೃಶ್ಯ

ಎಡೆ ಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ರಸ್ತೆ ಮಧ್ಯದ ಹಳ್ಳದಲ್ಲಿ ನಿಂತಿದ್ದ ನೀರನ್ನು ಹುಲಿರಾಯ ಕುಸಿಯುತ್ತಿರುವುದನ್ನು ಸಫಾರಿಗೆ ತೆರಳಿದವರು ಸೆರೆ ಹಿಡಿದಿದ್ದಾರೆ. ವ್ಯಾಘ್ರನನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಇನ್ನು, ವೀಡಿಯೋ ಬಂಡೀಪುರ ಸಫಾರಿಯಲ್ಲಿ ತೆಗೆದಿದ್ದಾಗಿದೆ ಎಂದು ಸಿಎಫ್ಒ ರಮೇಶ್ ಕುಮಾರ್ ದೃಢಪಡಿಸಿದ್ದಾರೆ.

ಇನ್ನೂ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version